ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಆಲದಮಡು ಗ್ರಾಮದಲ್ಲಿ ಚಿರತೆಯೊಂದು (Leopard) ಪ್ರತ್ಯಕ್ಷವಾದ ಘಟನೆ (Tumkur News) ಶುಕ್ರವಾರ ಬೆಳಗ್ಗೆ ಜರುಗಿದೆ.
ದೊಡ್ಡ ಆಲದಮಡು ಗ್ರಾಮದಲ್ಲಿ ಬೆಳಿಗ್ಗೆ ಚಿರತೆಯೊಂದು ನಾಯಿಯ ಮೇಲೆ ದಾಳಿ ಮಾಡಿ, ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡು ಗ್ರಾಮದ ಯುವಕನೊಬ್ಬ ಕಿರುಚಾಡಿದ್ದಾನೆ. ಆಗ ಗಾಬರಿಗೊಂಡ ಚಿರತೆ ತಕ್ಷಣವೇ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Namma Metro : ಮೆಟ್ರೋ ಪ್ರಯಾಣಿಕರ ಗಮನಕ್ಕೆ, ಭಾನುವಾರ ಈ ಮಾರ್ಗದಲ್ಲಿ ಸಂಚಾರ ಬಂದ್
ಬಳಿಕ ಗ್ರಾಮಸ್ಥರು ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಕೆ.ಮೂರ್ತಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಈ ವೇಳೆ ಚಿರತೆಯು ಅಲ್ಲಲ್ಲಿ ಓಡಾಡಿದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಈ ಕುರಿತು ಅರಣ್ಯ ಇಲಾಖೆಯ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಜಾಗ್ರತೆಯಿಂದಿರಲು ಸೂಚಿಸಿದರು.
ಇದನ್ನೂ ಓದಿ: Viral Video: ಹುಲಿ ಬೆಕ್ಕಿನ ಹಿರಿಯಣ್ಣ ಎನ್ನುವುದು ಇದಕ್ಕೆ; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ
ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ಹಿನ್ನಲೆಯಲ್ಲಿ ಕಾಡಿನ ಮಧ್ಯ ಭಾಗದಿಂದ ಅಂಚಿನ ಭಾಗಕ್ಕೆ ಚಿರತೆಯು ಬಂದಿರಬಹುದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಕೆ.ಮೂರ್ತಿ ತಿಳಿಸಿದ್ದಾರೆ.