Site icon Vistara News

Tumkur News: ಕೊರಟಗೆರೆಯಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ

Lingaikya Dr Sri Shivakumara Swamiji Jayanti celebration in Koratagere

ಕೊರಟಗೆರೆ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿಯನ್ನು ಪಟ್ಟಣದ ಎಸ್.ಎಸ್.ಆರ್. ವೃತ್ತದಲ್ಲಿ ಸೋಮವಾರ ಶ್ರದ್ಧಾ-ಭಕ್ತಿಯಿಂದ (Tumkur News) ಆಚರಿಸಲಾಯಿತು.

ಕೊರಟಗೆರೆ ಶ್ರೀ ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊರಟಗೆರೆ ಘಟಕ ಮತ್ತು ಬಿ.ಎಚ್. ಅನಿಲ್ ಕುಮಾರ್ ಹಾಗೂ ಪಿ.ಆರ್ ಸುಧಾಕರ್ ಲಾಲ್ ಅವರ ಅಭಿಮಾನಿ ಬಳಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪ್ರಸಾದ ವಿತರಿಸಲಾಯಿತು.

ಇದನ್ನೂ ಓದಿ: Shivamogga News: ಜಗನ್ಮಾತೆ ಪದ್ಮಾವತಿ ದೇವಿಯ ವೈಭವದ ಮಹಾರಥೋತ್ಸವ

ಕಾರ್ಯಕ್ರಮದಲ್ಲಿ ಕೊರಟಗೆರೆಯ ಶ್ರೀ ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿಯ ಪರ್ವತಯ್ಯ ಮತ್ತು ಬಿಜೆಪಿ ಕೊರಟಗೆರೆ ಮಂಡಲದ ತಾಲೂಕು ಅಧ್ಯಕ್ಷ ದರ್ಶನ್ ಮಾತನಾಡಿದರು.

ಇದನ್ನೂ ಓದಿ: Vijayanagara News: ವಿಕಾಸ ಬ್ಯಾಂಕ್‌ಗೆ 22.83 ಕೋಟಿ ರೂ. ಲಾಭ: ವಿಶ್ವನಾಥ ಚ.ಹಿರೇಮಠ

ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಪ್ರದೀಪ್‌ ಕುಮಾರ್, ಮುಖಂಡರಾದ ಪವನ್‌ ಕುಮಾರ್, ಸಿದ್ದಮಲ್ಲಪ್ಪ, ಹೊಳವನಹಳ್ಳಿ ಚೇತನ್‌ ಆರಾಧ್ಯ, ಸಿದ್ದರಾಜು, ನಂಜುಂಡಯ್ಯ, ಕಾಮರಾಜು, ಲಕ್ಷ್ಮೀಶ್, ಕೌಶಿಕ್, ರಮೇಶ್, ಗೋವಿಂದರೆಡ್ಡಿ, ಪ್ರೇಮ್ ಕುಮಾರ್, ರಂಗನಾಥ್, ಮಂಜುನಾಥ್, ಆಟೋ ಗೋಪಿ, ರವಿಕುಮಾರ್, ದಾಡಿ ವೆಂಕಟೇಶ್, ಸಿದ್ದರಾಜು, ಗುರುದತ್, ನಟರಾಜು, ನಂಜುಂಡಿ, ಸುನೀಲ್, ಸುಶೀಲಮ್ಮ, ಮಮತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version