ಶಿರಾ: ನಗರದ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಶುಕ್ರವಾರ ನೂತನ 5 ಅಶ್ವಮೇಧ ಬಸ್‌ಗಳ ಸಂಚಾರಕ್ಕೆ ಶಾಸಕ ಟಿ.ಬಿ. ಜಯಚಂದ್ರ ಚಾಲನೆ (Tumkur News) ನೀಡಿದರು.
ಇದನ್ನೂ ಓದಿ: IPL 2023 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು ಇವರು
ಶಿರಾದಿಂದ ತುಮಕೂರು, ಬೆಂಗಳೂರಿಗೆ ನೂತನ 5 ಅಶ್ವಮೇಧ ಬಸ್‌ಗಳ ಸಂಚಾರಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಬಸ್ಸಿನ ಕೊರತೆ ಉಂಟಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತು ಸಾರ್ವಜನಿಕರಿಗೆ ದಿನನಿತ್ಯ ಸಂಚರಿಸಲು ತೊಂದರೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ನೂತನ ಐದು ಅಶ್ವಮೇಧ ಬಸ್‌ಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನೂತನ ಅಶ್ವಮೇಧ ಬಸ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೂ ಬಸ್ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು
ಇದನ್ನೂ ಓದಿ: Subway Surfers: ಚಲಿಸೋ ರೈಲಿನ ಮೇಲೆ ನಿಂತು ಯುವಕನ ಹುಚ್ಚಾಟ; ಇಲ್ಲಿದೆ ವಿಡಿಯೊ!
ಈ ಸಂದರ್ಭದಲ್ಲಿ ಜಿಲ್ಲಾ ಸಾರಿಗೆ ನಿಯಂತ್ರಣ ಅಧಿಕಾರಿ ಬಸವರಾಜು, ಶಿರಾ ಘಟಕದ ವ್ಯವಸ್ಥಾಪಕ ವಿದ್ವತ್ ರಾವ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.