ಶಿರಾ: ನಗರದ ಕಸ ವಿಲೇವಾರಿ ಘಟಕದಲ್ಲಿನ ಕಸದ ರಾಶಿ ಬಳಿಯ ಗಿಡದ ಮೇಲೆ ರಾಷ್ಟ್ರಧ್ವಜ (National Flag) ಪತ್ತೆಯಾಗಿದ್ದು, ನಗರಸಭೆ ನಿರ್ಲಕ್ಷ್ಯಕ್ಕೆ ಕನ್ನಡಿ (Tumkur News) ಹಿಡಿದಂತಾಗಿದೆ.
ಕಳೆದ ರಾತ್ರಿ ಇಲ್ಲಿಯ ನಗರಸಭೆಯ ಕಸ ವಿಲೇವಾರಿ ಘಟಕೆ ಬೆಂಕಿ ಬಿದ್ದ ಕಾರಣ ರಾತ್ರಿಯಿಡೀ ಬೆಂಕಿಯಿಂದ ಹೊಗೆ ಆವರಿಸಿದ್ದು, ಬೆಳಗ್ಗೆ ಕಸದರಾಶಿಯ ಪಕ್ಕದ ಗಿಡವೊಂದರ ಮೇಲೆ ರಾಷ್ಟ್ರಧ್ವಜವು ಬಿದ್ದಿರುವುದು ಕಂಡುಬಂದಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಆಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Tumkur News : ತುಮಕೂರಿನಲ್ಲಿ ಮತ್ತೆ ದುರಂತ; ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದ ಅರ್ಚಕ
ರಾಷ್ಟ್ರಧ್ವಜ ಬಳಕೆ ಮತ್ತು ನಿರ್ವಹಣೆಯ ಮಾಡುವ ಕುರಿತು ಕಟ್ಟುನಿಟ್ಟಿನ ನಿರ್ದೇಶನಗಳಿವೆ. ಹೀಗಿರುವಾಗ ಕಸದ ರಾಶಿಯ ಬಳಿ ಪತ್ತೆಯಾಗಿರುವುದು ದುರಂತವೇ ಸರಿ.
ಈ ಕುರಿತು ಶಿರಾ ನಗರಸಭಾ ಆಯುಕ್ತ ರುದ್ರೇಶ್ ಅವರನ್ನು ವಿಸ್ತಾರ ನ್ಯೂಸ್ ಸಂಪರ್ಕಿಸಿದಾಗ ಈ ಘಟನೆಯು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.