Site icon Vistara News

Tumkur News: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ: ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ

Participate in religious programmes says Chandrasekhara Swamiji of Bettadahalli

ಗುಬ್ಬಿ: ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಶ್ರೀ ಗೋಪಾಲ ಕೃಷ್ಣಸ್ವಾಮಿ (Shri Gopal Krishnaswamy) ನೂತನ ದೇವಾಲಯದ (New Temple) ಪ್ರಾರಂಭೋತ್ಸವ ಮತ್ತು ಪುನರ್ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಗಳು, ಪರಿವರ್ತನೆ ಜಗದ ನಿಯಮ ಎಂದು ತಿಳಿದಿದ್ದರು ನಾವು ಮಾತ್ರ ಸ್ವಾರ್ಥ ಸಾಧನೆಯಿಂದ ಮುಂದುವರಿಯುತ್ತಿರುವುದು ನೋಡಿದಾಗ ಇಷ್ಟೆಲ್ಲಾ ಜ್ಞಾನಮಾರ್ಗಗಳು ಇದ್ದರೂ ಸಹ ಬದಲಾವಣೆ ಇದುವರೆಗೂ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ ಎಂದು ತಿಳಿಸಿದರು.

ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಭಾಗವಹಿಸಿದಾಗ ಮಾತ್ರ ಮಾನವೀಯ ಮೌಲ್ಯಗಳು, ಹಿರಿಯರ ಮೇಲಿನ ಗೌರವ ಹೆಚ್ಚುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Raichur News: ಸೋಪ್‌, ಚಾಕ್‌ಪೀಸ್‌ಗಳಲ್ಲಿ ಸೂಕ್ಷ್ಮ ಕಲಾಕೃತಿ ಅರಳಿಸುವ ಗ್ರಾಮೀಣ ಪ್ರತಿಭೆ

ಬಿ. ಕೋಡಿಹಳ್ಳಿ ಮಠದ ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಸನಾತನ ಧರ್ಮ, ಪರಂಪರೆ, ಸಂಸ್ಕೃತಿ, ಸಂಸ್ಕಾರಗಳು ಜೀವಂತವಾಗಿ ಇನ್ನೂ ನೂರಾರು ವರ್ಷಗಳ ಕಾಲ ಉಳಿಯಬೇಕಾಗಿದೆ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಮಾಜಿ ಶಾಸಕ ನೆ.ಲ ನರೇಂದ್ರಬಾಬು ಮಾತನಾಡಿ, ಇತ್ತೀಚೆಗೆ ಸನಾತನ ಧರ್ಮ ಹಿಂದೂ ಧರ್ಮದ ಬಗ್ಗೆ ವಿರೋಧವಾಗಿ ಮಾತನಾಡುವುದು ನೋಡಿದಾಗ ನಾವು ಎತ್ತ ಸಾಗುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರು ಆಲೋಚಿಸಬೇಕಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ನಮ್ಮ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿದಾಗ ಸಮಾಜದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಇದನ್ನೂ ಓದಿ: NPCI New Products: ಯುಪಿಐ ಮೂಲಕ ಹಣ ಪಾವತಿಸಲು ಇನ್ನು ನಿಮ್ಮ ಧ್ವನಿ ಸಾಕು! ಏನಿದು?

ಈ ಸಂದರ್ಭದಲ್ಲಿ ಗೊಲ್ಲಹಳ್ಳಿ ಮಠದ ವಿಭವ ವಿಧ್ಯಾಶಂಕರ ಮಹಾಸ್ವಾಮಿಜಿ, ನೊಣವಿನಕೆರೆಯ ಕಿರಿಯ ಸ್ವಾಮೀಜಿ , ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರ್, ಮುಖಂಡರಾದ ನರಸಿಂಹಯ್ಯ, ಹಾರನಹಳ್ಳಿ ಪ್ರಭಾಕರ್, ಕಿಶೋರ್, ಶ್ರೀನಿವಾಸ್, ಸಿದ್ದಲಿಂಗಪ್ಪ, ಬಸವರಾಜು, ಸೇರಿದಂತೆ ಇನ್ನಿತರರು ಹಾಜರಿದ್ದರು.

Exit mobile version