Site icon Vistara News

Tumkur News: ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ: ಹೂವು ವ್ಯಾಪಾರಿಗಳಿಂದ ಪ್ರತಿಭಟನೆ

Protest against relocation of flower market in shira

ಶಿರಾ: ನಗರದ ಲಕ್ಷ್ಮೀನಗರದ ಬಳಿ ಇರುವ ಹೂವಿನ ಮಾರುಕಟ್ಟೆಯನ್ನು ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಹೂವು ವ್ಯಾಪಾರಿಗಳು ಶುಕ್ರವಾರ ಬೆಳಗಿನ ಜಾವ ರಸ್ತೆಯಲ್ಲಿ ಪ್ರತಿಭಟನೆ (Tumkur News) ನಡೆಸಿದರು.

ಇಲ್ಲಿನ ಲಕ್ಷ್ಮೀನಗರದ ಮಾರುಕಟ್ಟೆಯನ್ನು ತಾಲೂಕಿನ ಚಿಕ್ಕನಹಳ್ಳಿ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಚಿಕ್ಕನಹಳ್ಳಿ ಗ್ರಾಮದ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದಲ್ಲಿ ವ್ಯಾಪಾರ ನಡೆಸುವಂತೆ ನಗರಸಭೆ ಅಧಿಕಾರಿಗಳು ಕಳೆದ ಮೂರು ದಿನಗಳ ಹಿಂದೆ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: Viral News: ಈತನಿಗೆ 43 ಲಕ್ಷ ರೂ. ಸಂಬಳ! ಆದರೂ, ಉಚಿತ ಊಟ ನೀಡುವ ಕಂಪನಿ ಬೇಕಂತೆ!

ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಗರಸಭೆ ಆಯುಕ್ತ ರುದ್ರೇಶ್‌ ನೇತೃತ್ವದಲ್ಲಿ ಚಿಕ್ಕನಹಳ್ಳಿ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಹೂವು ಮಾರಾಟಗಾರರು ನಗರದ ಮಾರಾಟ ಕೇಂದ್ರದ ಒಳಗಡೆ ಹೋಗದಂತೆ ಬ್ಯಾರಿಕೇಡ್‌ ಅಳವಡಿಸಿದ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ, ಹೂವಿನ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Karnataka Budget 2024 : ಕರ್ನಾಟಕದ ಕರಾವಳಿಯ ನದಿಗಳ ಮೇಲೆ ಮೆಟ್ರೊ; ಏನಿದು ಹೊಸ ಯೋಜನೆ?

ಚಿಕ್ಕನಹಳ್ಳಿ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರವು ಶಿರಾ ನಗರದಿಂದ ಸುಮಾರು 9 ಕಿಮೀ ದೂರದಲ್ಲಿದೆ. ಮಾರುಕಟ್ಟೆಗೆ ಹೋಗಲು ರೈತರು‌ ಮತ್ತು ವ್ಯಾಪಾರಿಗಳಿಗೆ ಬೆಳಗಿನ ಸಮಯದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇರುವುದಿಲ್ಲ ಹಾಗೂ ಖರೀದಿದಾರರು ಬರುವುದಿಲ್ಲ ಜತೆಗೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ಓಡಾಡಲು ತೀರಾ ಕಷ್ಟವಾಗುತ್ತದೆ. ಅಷ್ಟೇ ಅಲ್ಲ ಅಲ್ಲಿಗೆ ತೆರಳಲು ಆಟೋಗಳಿಗೆ ಬಾಡಿಗೆ ಹಣ ನೀಡಬೇಕಾಗುತ್ತದೆ ಎಂದು ಹೂವು ವ್ಯಾಪಾರಿಗಳು ದೂರಿದರು. ಪ್ರತಿಭಟನೆಯಲ್ಲಿ ತಾಲೂಕಿನ ಸುತ್ತಮುತ್ತಲಿನ ನೂರಾರು ವ್ಯಾಪಾರಿಗಳು ಪಾಲ್ಗೊಂಡಿದ್ದರು.

Exit mobile version