ಗುಬ್ಬಿ: ಕಳೆದ ಎರಡು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಹಣವನ್ನು ಬಟವಾಡೆ ಮಾಡಿಲ್ಲ ಎಂದು ಆರೋಪಿಸಿ, ಶನಿವಾರ ತಾಲೂಕಿನ ಹೊದಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗ ಹಾಲು ಉತ್ಪಾದಕರಿಂದ ಪ್ರತಿಭಟನೆ (Protest) ನಡೆಯಿತು.
ಕಳೆದ ಎರಡು ತಿಂಗಳಿನಿಂದ ನಮಗೆ ಹಣವನ್ನು ಬಟವಾಡೆ ಮಾಡಿಲ್ಲ ಇದನ್ನೇ ನಂಬಿಕೊಂಡು ನಾವು ಜೀವನವನ್ನು ಮಾಡುತ್ತಿದ್ದರೂ ಸಹ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಮಗೆ ಸರಿಯಾದ ರೀತಿಯಲ್ಲಿ ಬಟವಾಡೆಯನ್ನು ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನೂ ಓದಿ: KARTET Result 2023: ಟಿಇಟಿ ಫಲಿತಾಂಶ; ಶಿಕ್ಷಕರಾಗಲು 64,830 ಅಭ್ಯರ್ಥಿಗಳು ಅರ್ಹ
ರೈತ ಮಹಾಲಿಂಗಯ್ಯ ಮಾತನಾಡಿ, ಸಂಘ ನಿರ್ಮಾಣವಾಗಿ 20 ವರ್ಷಕ್ಕೂ ಹೆಚ್ಚು ಕಳೆದಿದ್ದರು ಯಾವುದೇ ಸೌಲಭ್ಯವನ್ನು ಇದುವರೆಗೂ ಈ ಉತ್ಪಾದಕರ ಸಂಘ ಹೊಂದಿಲ್ಲ, ಕಚೇರಿಯಲ್ಲಿ ಕೂಡಲು, ನಿಲ್ಲಲು ಜಾಗವಿಲ್ಲದಂತಹ ಸ್ಥಿತಿಯಿದೆ ಎಂದು ಆರೋಪಿಸಿದ ಅವರು. ಕೂಡಲೇ ಈ ಸಮಿತಿಯನ್ನು ರದ್ದು ಮಾಡಿ ಬೇರೆ ಸಮಿತಿ ರಚನೆ ಮಾಡಬೇಕು, ಕೂಡಲೇ ನಮ್ಮ ಬಾಕಿಯಿರುವ ಹಣವನ್ನು ಬಟವಾಡೆ ಮಾಡಬೇಕು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಮುಂದಾಗದಿದ್ದರೆ ಮುಂದಿನ ದಿನದಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
ಇದನ್ನೂ ಓದಿ: Heart Health In Winter: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗುವುದು ಹೇಗೆ?
ಪ್ರತಿಭಟನೆಯಲ್ಲಿ ನಟರಾಜು, ಸಂತೋಷ್, ಸಿದ್ದು, ಹೆಂಜಾರಪ್ಪ, ಪುಟ್ಟ ಸೋಮಯ್ಯ, ಸೋಮಸುಂದರ, ದಾಸೇಗೌಡ, ಪರಮೇಶ್, ಕಾಂತ ರಾಜು, ವಿಜಿಕುಮಾರ್, ಬೋರನರಸಯ್ಯ, ಜಯಂತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.