ಶಿರಾ: ಶಾಲಾ-ಕಾಲೇಜುಗಳಿಗೆ ತೆರಳಲು ಬಸ್ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮರ್ಪಕ ಬಸ್ ಸೌಕರ್ಯ (Bus Facility) ಕಲ್ಪಿಸಬೇಕು ಎಂದು ಆಗ್ರಹಿಸಿ, ವಿದ್ಯಾರ್ಥಿಗಳು ಶಿರಾ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್ ತಡೆ ನಡೆಸಿ, ಪ್ರತಿಭಟನೆ (Protest) ನಡೆಸಿದರು.
ಮುಂಜಾನೆಯಿಂದ ಬಸ್‌ಗಾಗಿ ಕಾಯುತ್ತಿದ್ದರೂ, ಬಸ್ ಇಲ್ಲದೇ ಪರದಾಡುವಂತಾಗಿದೆ, ಶಿರಾ ನಗರದಿಂದ ತುಮಕೂರಿಗೆ ನೂರಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳುತ್ತಾರೆ, ಆದರೆ ಬೆಳಗ್ಗೆ 6 ಗಂಟೆಯಿಂದಲೇ ಕಾದು ಕುಳಿತರೂ ಬಸ್‌ಗಳು ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ದಿಢೀರ್ ಬಸ್‌ಗಳನ್ನು ತಡೆದು, ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Education News : ಪದವೀಧರ ಶಿಕ್ಷಕರ ಜ್ಯೇಷ್ಠತೆ ಸಮಸ್ಯೆ ಬಗ್ಗೆ ಸಿಎಂ ಜತೆ ಶೀಘ್ರ ಚರ್ಚೆ: ಮಧು ಬಂಗಾರಪ್ಪ
ಈ ಕುರಿತು ಹಲವು ಬಾರಿ ಬಸ್ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರೂ, ಅವರು ಅಗತ್ಯ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಚಿತ್ರದುರ್ಗ ಕಡೆಯಿಂದ ಬರುವ ಬಸ್‌ಗಳು ನಗರಕ್ಕೆ ಬರದೇ ಬೈಪಾಸ್ ಮೂಲಕ ಹೋಗುತ್ತವೆ, ಬಸ್‌ಗಳು ಬಾರದೇ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಇದರಿಂದ ಪಾಠಗಳನ್ನು ಕೇಳಲು ಆಗುತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Star Saloon Awareness: ಸಲೂನ್‌ಗಳಲ್ಲಿ ಹೇರ್ ಕಲರಿಂಗ್ ಮಾಡಿಸುವಾಗ ಎಚ್ಚರವಿರಲಿ!
ಈ ವೇಳೆ ಮಧ್ಯೆ ಪ್ರವೇಶಿಸಿದ ನಗರ ಪೊಲೀಸ್ ಅಧಿಕಾರಿಗಳು ಮತ್ತು ಶಿರಾ ಬಸ್ ಡಿಪೊ ಅಧಿಕಾರಿ ವಿದ್ಯಾರ್ಥಿಗಳ ಮನವೊಲಿಸಿ, ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ. ಪ್ರತಿಭಟನೆಯಲ್ಲಿ ಶಿರಾ ಭಾಗದ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.