Site icon Vistara News

Tumkur News: ಶಿರಾ; ಬಸ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

Protest by students parents demanding bus facility at Shira

ಶಿರಾ: ತಾಲೂಕಿನ ದೊಡ್ಡ ಆಲದಮರ ಗೇಟ್‌ನಿಂದ ಶಿರಾ ನಗರಕ್ಕೆ ಬಸ್‌ ಸೌಲಭ್ಯ (Bus Facility) ಕಲ್ಪಿಸುವಂತೆ ಆಗ್ರಹಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಬುಧವಾರ ಬೆಳಿಗ್ಗೆ ದೊಡ್ಡ ಅಲದಮರ ಗೇಟ್ ಬಳಿ ಬಸ್‌ ತಡೆದು ಪ್ರತಿಭಟನೆ (Protest) ನಡೆಸಿದರು.

ಸರಿಯಾದ ಸಮಯಕ್ಕೆ ಬಸ್ ಬಾರದಿರುವುದರಿಂದ ಶಾಲಾ-ಕಾಲೇಜು ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ತೊಂದರೆಯಾಗುತ್ತಿದೆ, ಬಸ್‌ ಸೌಲಭ್ಯ ಕಲ್ಪಿಸುವಂತೆ ಸಾರಿಗೆ ಸಂಸ್ಥೆಯ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡಿ.1ರಿಂದ ಸಿಮ್‌ ಕಾರ್ಡ್‌ ಹೊಸ ರೂಲ್ಸ್; ನಿಯಮ ಮೀರಿದ್ರೆ 10 ಲಕ್ಷ ರೂ. ದಂಡ!

ಬೆಳಿಗ್ಗೆ 8 ಗಂಟೆಯಿಂದಲೇ ಸುಮಾರು 150 ಕ್ಕಿಂತ ಹೆಚ್ಷು ವಿದ್ಯಾರ್ಥಿಗಳು ಹಾಗೂ ಪೋಷಕರು ಆಲದಮರ ಗೇಟ್‌ ರಾಷ್ಟ್ರೀಯ ಹೆದ್ದಾರಿ ಬಳಿ ಬಸ್‌ಗಳನ್ನು ತಡೆದು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಇದರಿಂದ‌ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆಯ ಬದಿಗಳಲ್ಲಿ ಬಸ್ಸುಗಳು ಸಾಲಾಗಿ ನಿಂತಿದ್ದವು.

ಈ ವೇಳೆ ಕಳ್ಳಂಬೆಳ್ಳ ಠಾಣೆಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು, ಆದರೆ ಮೊದಲು ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಇದನ್ನೂ ಓದಿ: Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

ನಂತರ ಸ್ಥಳಕ್ಕೆ ಆಗಮಿಸಿದ ಶಿರಾ ಸಾರಿಗೆ ಸಂಸ್ಥೆ ಅಧಿಕಾರಿ ವಿದ್ವತ್‌ ರಾವ್ ಮಾತನಾಡಿ, ಶಾಲಾ, ಕಾಲೇಜು ಸಮಯಕ್ಕೆ ಸೂಕ್ತ ಬಸ್ ಸೌಲಭ್ಯವನ್ನು ನಾಳೆಯಿಂದಲೇ ದೊಡ್ಡ ಅಲದಮರ ಗೇಟ್‌ನಿಂದಲೇ ವ್ಯವಸ್ಥೆ ಮಾಡುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಅಂತ್ಯಗೊಳಿಸಿದರು.

Exit mobile version