ಶಿರಾ: ಶ್ರೀ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯ ವತಿಯಿಂದ ಮಾ.8ರಂದು ಮಹಾಶಿವರಾತ್ರಿಯ (Mahashivaratri) ಅಂಗವಾಗಿ ಶಿರಾ ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಡಾ. ಪಿ.ಎಸ್. ಸುರೇಶ್ ಶಾಸ್ತ್ರಿ (Tumkur News) ತಿಳಿಸಿದರು.
ಇದನ್ನೂ ಓದಿ: Bilateral Hand Transplant: ದೆಹಲಿ ವೈದ್ಯರ ಅಪರೂಪದ ಸಾಧನೆ; ವ್ಯಕ್ತಿಯೊಬ್ಬರಿಗೆ ದಾನಿಯ ಎರಡೂ ಕೈಗಳ ಯಶಸ್ವಿ ಜೋಡಣೆ
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಂತೆಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಕೂಡ ಮಹಾ ಶಿವರಾತ್ರಿಯ ದಿನದಂದು ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 5 ಗಂಟೆಗೆ ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 6.30 ಕ್ಕೆ ಸಹಸ್ರ ಲಿಂಗಾರ್ಚನೆ, ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಪೂಜೆಗೆ ಯಾವುದೇ ಶುಲ್ಕ ಇಲ್ಲ. ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಪೂಜೆಯ ನಂತರ ಲಿಂಗಗಳನ್ನು ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ICC Test Rankings: ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಜೈಸ್ವಾಲ್
ಈ ಸಂದರ್ಭದಲ್ಲಿ ಸಮಿತಿಯ ವಿಜಯ್ ಸಿಂಹ, ನಂದಿನಿ ಶೇಖರ್, ನರಸಿಂಹಮೂರ್ತಿ, ಆರ್. ರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು.