ಕೊರಟಗೆರೆ: ಮಾ.1 ರಿಂದ 22ರವರೆಗೆ ದ್ವಿತೀಯ ಪಿಯುಸಿ (Second PUC) ಅಂತಿಮ ಪರೀಕ್ಷೆಗಳು ನಡೆಯಲಿದ್ದು, ಕೊರಟಗೆರೆ ತಾಲೂಕಿನಲ್ಲಿ ಒಟ್ಟು 1032 ವಿದ್ಯಾರ್ಥಿಗಳು ನೋಂದಣಿ (Tumkur News) ಮಾಡಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಒಟ್ಟು 1032 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ವಿಜ್ಞಾನ ವಿಭಾಗದಲ್ಲಿ 217 ಬಾಲಕಿಯರು, 117 ಬಾಲಕರು, ಒಟ್ಟು 334 ವಿದ್ಯಾರ್ಥಿಗಳು. ವಾಣಿಜ್ಯ ವಿಭಾಗದಲ್ಲಿ 245 ಬಾಲಕಿಯರು, 139 ಬಾಲಕರು, ಒಟ್ಟು 384 ವಿದ್ಯಾರ್ಥಿಗಳು. ಕಲಾ ವಿಭಾಗದಲ್ಲಿ 123 ಬಾಲಕಿಯರು, 113 ಬಾಲಕರು. ಒಟ್ಟು 236 ವಿದ್ಯಾರ್ಥಿಗಳು.
ಇದನ್ನೂ ಓದಿ: ಬಾಡಿ ಬಿಲ್ಡಿಂಗ್‌ಗಾಗಿ 39 ನಾಣ್ಯ, 37 ಮ್ಯಾಗ್ನೆಟ್ ನುಂಗಿದ ವ್ಯಕ್ತಿ; ಮುಂದೇನಾಯ್ತು?
ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 17 ಬಾಲಕಿಯರು, 36 ಬಾಲಕರು. ಒಟ್ಟು 53 ವಿದ್ಯಾರ್ಥಿಗಳು. 25 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆಯಾಗಿ 1032 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರವಾಗಿದೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಎಲ್ಲಾ ವಿಷಯಗಳ ಪರೀಕ್ಷೆಯು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿವೆ.
ಇದನ್ನೂ ಓದಿ: Viral Video: ರೀಲ್ಸ್ ಮಾಡೋ ಗೀಳು; ನಾಯಿಗೆ ಚಿತ್ರಹಿಂಸೆ ನೀಡಿದ ಯುವಕನಿಗೀಗ ಕಾದಿದೆ…
ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಸಿಸಿ ಟಿವಿ ಕ್ಯಾಮೆರಾ, ಡೆಸ್ಕ್ ಮತ್ತು ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ನೇರಂ ನಾಗರಾಜು ಮಾಹಿತಿ ತಿಳಿಸಿದ್ದಾರೆ.