ಶಿರಾ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಮಾನ್ಯತೆ ಪಡೆದ ಶಿರಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ (Shira Government Mother and Child Hospital) ವೈದ್ಯಾಧಿಕಾರಿಗಳನ್ನು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಡಾ. ಪಿ.ಎಚ್. ಮಹೇಂದ್ರಪ್ಪ ಮಾತನಾಡಿ, ತಾಯಿ ಮಕ್ಕಳ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆ ಮತ್ತು ರೋಗಿಗಳೊಂದಿಗೆ ಇರುವ ಉತ್ತಮ ಬಾಂಧವ್ಯವನ್ನು ಗುರುತಿಸಿ, ರಾಷ್ಟ್ರೀಯ ಮಾನ್ಯತೆಯನ್ನು ನೀಡಲಾಗಿದೆ.
ಯೋಗವು ಒಂದು ದಿವ್ಯ ಔಷಧ. ಶುಭ ಭಾವನೆ, ಸಕಾರಾತ್ಮಕ ಚಿಂತನೆಗಳು, ರೋಗಿಯನ್ನು ಶೀಘ್ರ ಗುಣಮುಖವನ್ನಾಗಿ ಮಾಡುತ್ತದೆ. ಆದ್ದರಿಂದ ವೈದ್ಯರು ಮತ್ತು ಸಿಬ್ಬಂದಿ, ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಶುಭ ಭಾವನೆ ಮತ್ತು ಸಕಾರಾತ್ಮಕ ಭಾವನೆಗಳೊಂದಿಗೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI FD Rates: ಎಫ್‌ಡಿ ಠೇವಣಿದಾರರಿಗೆ ಎಸ್‌ಬಿಐ ಗುಡ್ ನ್ಯೂಸ್; ಬಡ್ಡಿದರ ಭಾರಿ ಹೆಚ್ಚಳ
ಈ ಸೇವೆ ಸಾರ್ಥಕವಾದುದು, ನಿಮ್ಮ ಈ ಪ್ರಯತ್ನ ಮತ್ತು ಪರಿಶ್ರಮದಿಂದ ಈ ಆಸ್ಪತ್ರೆ ಉತ್ತಮ ಆಸ್ಪತ್ರೆಯಾಗಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿದ ಆಸ್ಪತ್ರೆಯ ಡಾ. ಡಿ.ಎಂ. ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗೌರವಿಸಿ, ಸನ್ಮಾನಿಸಲಾಯಿತು.
ಇದನ್ನೂ ಓದಿ: Utthana Katha Spardhe: ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2023; ಶಿರಸಿಯ ಕರುಣಾಕರ ಹಬ್ಬುಮನೆ ಪ್ರಥಮ
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಸ್ನೇಹ, ಡಾ.ರವಿಶಂಕರ್, ಡಾ. ಮೇಘಶ್ರೀ, ದರ್ಶನ್, ಡಾ. ನರೇಂದ್ರಬಾಬು, ಭಾರತಿ, ಡಾ. ವಿನಯ, ಡಾ.ಮೌಲ್ಯ ಮತ್ತು ಅರವೈದ್ಯಕೀಯ ಸಿಬ್ಬಂದಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅನ್ನಪೂರ್ಣ ಮತ್ತು ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.