Site icon Vistara News

Tumkur News: ಶಿರಾ ನಗರಸಭೆಯ ಸಾಮಾನ್ಯ ಸಭೆ: ಹಲವು ಸದಸ್ಯರ ಗೈರು

Tumkur News Shira Municipal Council General assembly Many Members Absent

ಶಿರಾ: ಇಲ್ಲಿನ ನಗರಸಭೆಯ (Municipal Council) ಸಭಾಭವನದಲ್ಲಿ ಅಧ್ಯಕ್ಷೆ ಪೂಜಾ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಬಹುತೇಕ ಸದಸ್ಯರು ಗೈರಾಗಿದ್ದು (Absent), ಖಾಲಿ ಕುರ್ಚಿಗಳು ಕಂಡುಬಂದವು.

ನಗರಸಭೆಗೆ ಪೂಜಾ ಅವರು ಅಧ್ಯಕ್ಷರಾದ ಬಳಿಕ ನಡೆದ ಮೊದಲ ಸಭೆ ಇದಾಗಿದ್ದು, ಹಿಂದಿನ ನಗರಸಭೆ ಅಧ್ಯಕ್ಷ ಬಿ. ಅಂಜಿನಪ್ಪ ಅವರ ಅವಧಿಯಲ್ಲಿ ನಡೆದಿದ್ದ ಸಭೆಯ ಮುಂದುವರಿದ ಭಾಗದ ಸಭೆ ಮಂಗಳವಾರ ನಡೆಯಿತು.

ಸಭೆಯಲ್ಲಿ ಅನೇಕ ಸದಸ್ಯರು ಇಲ್ಲದ ಕಾರಣ ನಗರಸಭೆ‌ 10ನೇ ವಾರ್ಡ್‌ನ ಸದಸ್ಯರು ಸಭೆಯಲ್ಲಿ ಕೊರಂ ಕೊರತೆ ಇರುವ ಕಾರಣ ಸಭೆ ಮುಂದೂಡಿ ಎಂದು‌ ಒತ್ತಾಯಿಸಿದರು.

ಇದನ್ನೂ ಓದಿ: Viral Video: ರೋಹಿತ್​ ಅವರನ್ನು ಮಗುವಿನಂತೆ ತಬ್ಬಿಕೊಂಡು ಸಂಭ್ರಮಿಸಿದ ಕೊಹ್ಲಿ

ಬಳಿಕ ಸುಮಾರು ಹನ್ನೆರಡು ಸದಸ್ಯರ ಗೈರುಹಾಜರಿಯಲ್ಲಿ ಆರಂಭವಾದ ಸಭೆಯಲ್ಲಿ ನಗರಸಭೆಯ ಅಂಗಡಿ ಮಳಿಗೆಗಳ ಬಾಡಿಗೆ 6 ಕೋಟಿ ರೂ. ಬಾಕಿ ಇದ್ದು ಕಟ್ಟುನಿಟ್ಟಾಗಿ ಹಣ ವಸೂಲು ಮಾಡಲು ಸೂಚನೆ ಮತ್ತು ನಗರಸಭಾ ಸಿಬ್ಬಂದಿ ವಸೂಲಿಗೆ ಕ್ರಮವನ್ನು ಕೈಗೊಂಡಿಲ್ಲ, ಜತೆಗೆ ಐಡಿಎಸ್ಎಂಟಿ ಅಂಗಡಿ ಮಳಿಗೆಗಳು ಅವೈಜ್ಞಾನಿಕ ಕಟ್ಟಡವಾಗಿದ್ದು ಅದನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಿ, ರಸ್ತೆ ಬದಿಯಲ್ಲಿರುವ ತರಕಾರಿ ಮತ್ತು ಹೂವಿನ ಮಾರುಕಟ್ಟೆಯ ವ್ಯಾಪಾರಸ್ತರಿಗೆ ನೀಡಿದರೆ ಅನುಕೂಲವಾಗುತ್ತದೆ ಎಂದು ಸದಸ್ಯೆ ಉಮಾ ಒತ್ತಾಯಿಸಿದರು.

ಸಭೆಯಲ್ಲಿ ನಗರ ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಚರ್ಚೆ ನಡೆಸಲಾಯಿತು.

ಇದನ್ನೂ ಓದಿ: RBI Guidelines: ಆರ್‌ಬಿಐ ಹೊಸ ರೂಲ್ಸು, 30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ!

ಸಭೆಯಲ್ಲಿ ಶಾಸಕ ಟಿ.ಬಿ .ಜಯಚಂದ್ರ ಮಾತನಾಡಿ, ನಗರಸಭೆ ಅಂಗಡಿ ಮಳಿಗೆಗಳು ಟೆಂಡರ್ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸೋಣ. ಮೊದಲು ಅಂಗಡಿ ಮಳಿಗೆಗಳ 6 ಕೋಟಿ ರೂ.ಗಳ ಬಾಕಿ ಹಣವನ್ನು ಕಡ್ಡಾಯವಾಗಿ ವಸೂಲು ಮಾಡಲು ಹಾಗೂ ನಗರದ ಅನೇಕ ಭಾಗಗಳ ಮುಖ್ಯ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಐದು, ಆರು ಅಂತಸ್ತಿನ ಮಳಿಗೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ . ಕಾನೂನು ಬಾಹಿರವಾಗಿ 2 ಅಂತಸ್ತಿಗೂ ಹೆಚ್ಚು ವಾಣಿಜ್ಯ ಮಳಿಗೆ ಕಟ್ಟಿಕೊಂಡವರ ವಿರುದ್ಧ ನಿರ್ಧಾಕ್ಷಿಣ್ಯದ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸದಸ್ಯರಾದ ಆರ್. ರಾಮು, ಬಿ.ಆಂಜಿನಪ್ಪ, ಉಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version