ಗುಬ್ಬಿ: ಮುಂದಿನ ಮೂರು ತಿಂಗಳಿನಲ್ಲಿ ಗುಬ್ಬಿ (Gubbi) ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛ ತುಮಕೂರು ಅಭಿಯಾನವನ್ನು (Swachh Tumkur campaign) ಪೂರ್ಣಗೊಳಿಲಾಗುವುದು ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ತಿಳಿಸಿದರು.
ತಾಲೂಕಿನ ಕೊಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಣೆಗಂಗಾ ಕ್ಷೇತ್ರದಲ್ಲಿ ಶುಕ್ರವಾರ ಸ್ವಚ್ಛ ತುಮಕೂರು ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಹಾವಳಿಯಿಂದ ನಮ್ಮ ಪರಿಸರವನ್ನು ಸಂರಕ್ಷಿಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಸ್ವಚ್ಛತೆಗಾಗಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದು ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ ವಾಹನ ವ್ಯವಸ್ಥೆ ಮಾಡಲಾಗಿದ್ದು ನಮ್ಮ ವಾಹನ ಬಂದಾಗ ಸಾರ್ವಜನಿಕರು ಅದರಲ್ಲೇ ಕಸ ಹಾಕುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Black Hole: ಸೂರ್ಯನಕ್ಕಿಂತ 6.5 ಶತಕೋಟಿ ಪಟ್ಟು ದೊಡ್ಡ ‘ಕಪ್ಪು ಕುಳಿ’ ಗರಗರನೆ ತಿರುಗುತ್ತಿದೆ! ಹೊಸ ಆವಿಷ್ಕಾರ
ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿಂದು ಮಾಧವ ಮಾತನಾಡಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಸ್ವಚ್ಛತೆ ಬಹಳ ಮುಖ್ಯ. ಕುಡಿಯುವ ನೀರು, ತಿನ್ನುವ ಆಹಾರ, ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಖಂಡಿತವಾಗಿಯೂ ಉತ್ತಮ ಪರಿಸರ ಸೃಷ್ಟಿಸಬಹುದು ಎಂದು ತಿಳಿಸಿದರು.
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿದರು.
ಇದನ್ನೂ ಓದಿ: Bengaluru Traffic: ಟ್ರಾಫಿಕ್ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!
ಈ ಸಂದರ್ಭದಲ್ಲಿ ಕೊಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಞಾನಾಂಬಿಕ, ಉಪಾಧ್ಯಕ್ಷ ಸೋಮೇಗೌಡ, ಸದಸ್ಯರಾದ ಲೋಕೇಶ್, ದಿಲೀಪ್, ಲೋಕೇಶ್, ಮೀನಾಕ್ಷಿ, ಯಶೋದಮ್ಮ, ಲಕ್ಷ್ಮಿ ದೇವಮ್ಮ, ಮುಖಂಡರಾದ ಸುಧಾಕರ್, ಸತೀಶ್, ಅಭಿವೃದ್ಧಿ ಅಧಿಕಾರಿ ರಂಗನಾಥ, ಸಿಡಿಪಿಓ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.