Site icon Vistara News

Tumkur News | ಬೀಚನಹಳ್ಳಿಯಲ್ಲಿ ಹೆಜ್ಜೇನು ದಾಳಿಗೆ ರೈತ ಬಲಿ

Tumkur News

ತುಮಕೂರು : ಕುಣಿಗಲ್ ತಾಲೂಕಿನ ಬೀಚನಹಳ್ಳಿ (Tumkur News) ಗ್ರಾಮದಲ್ಲಿ ಹೆಜ್ಜೇನು ದಾಳಿಗೆ ರೈತರೊಬ್ಬರು ಗುರುವಾರ (ಸೆ.22) ಮೃತಪಟ್ಟಿದ್ದಾರೆ. ಗ್ರಾಮದ ರೈತ ರಾಮಣ್ಣ ತೋಟದ ಬಳಿ ಹಸುಗಳನ್ನು ಮೇಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ರೈತ ರಾಮಣ್ಣ ತೋಟದ ಬಳಿ ಹಸುಗಳನ್ನು ಮೇಯಿಸುತ್ತಿದ್ದರು. ಏಕಾಏಕಿ ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಮಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ಮತ್ತೊಬ್ಬ ರಾಜು ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಹುಲಿಯೂರುದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ | ಚಾಮರಾಜನಗರ| ಭತ್ತ ನಾಟಿ ವೇಳೆ ಸಿಡಿಲು ಬಡಿದು ರೈತ ಸಾವು, ನದಿ ನೀರಲ್ಲಿ ಮುಳುಗಿದ ಪೊಲೀಸ್‌ ಸ್ಟೇಷನ್‌

Exit mobile version