ಕೊರಟಗೆರೆ: ತಾಲೂಕಿನ ಥರಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಬುಧವಾರ (Tumkur News) ದೊಡ್ಡನರಸಯ್ಯನಪಾಳ್ಯ ಗ್ರಾಮದ ಟಿ.ಎಂ. ಕುಮಾರ್ ಎಂಬುವರ ಪುತ್ರಿ ವಿಶೇಷ ಚೇತನ ಮೇಘನಾ ಅವರಿಗೆ ವಿಲ್ ಚೇರ್ (Wheel chair) ವಿತರಣೆ ಮಾಡಲಾಯಿತು.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ನಾಳೆ ಕನಿಷ್ಠ -ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ವಿಲ್‌ಚೇರ್ ವಿತರಣೆ ಮಾಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ಟಿ.ಎಂ. ಕುಮಾರ್ ಎಂಬುವರ ಪುತ್ರಿ, ವಿಶೇಷ ಚೇತನರಾದ ಮೇಘನಾ ಅವರನ್ನು ಕ್ಷೇತ್ರದ ವತಿಯಿಂದ ಗುರುತಿಸಿ ವಿಲ್ ಚೇರ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Viral News: ಈ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಆದಾಯ ವಾರಕ್ಕೆ 120 ಕೋಟಿ ರೂ !
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಪುಟ್ಟರಾಜು, ವಲಯ ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿಗಳಾದ ಇಂದಿರಾ, ರತ್ನ, ಉಷಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.