ಶಿರಾ: ವಿಧಾನಸಭಾ ಚುನಾವಣೆಯ ರಂಗು ಎಲ್ಲೆಡೆ ಹೆಚ್ಚಾಗಿದೆ. ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳಿಗೆ ಭಾರತೀಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರನ್ನು ನಿಯೋಜಿಸಲಾಗಿದ್ದು, ಅವರು ಈಗಾಗಲೇ ಕ್ಷೇತ್ರಗಳತ್ತ ತೆರಳಲಾರಂಭಿಸಿದ್ದಾರೆ. ತುಮಕೂರಿನ ಶಿರಾ ನಗರಕ್ಕೂ ಸೈನಿಕರು ಆಗಮಿಸಿದ್ದು, ನಾಗರಿಕರು ಅವರಿಗೆ ಹೂವನ್ನು ಬೀರಿ ಸ್ವಾಗತ (Tumkuru News) ಕೋರಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲಿ ಎಂದು ಚುನಾವಣಾ ಭದ್ರತೆಗಾಗಿ ಬಂದ ಸೈನಿಕರನ್ನು ನಿಯೋಜಿಸಲಾಗಿದೆ. ಶಿರಾದ ನಾಗರಿಕರು ಸೈನಿಕರ ಮೇಲೆ ಹೂವು ಬೀರಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈನಿಕರು ಮತ್ತು ಪೊಲೀಸರಿಗೆ ಮೆರವಣಿಗೆ ಮಾಡಿ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.
ಇದನ್ನೂ ಓದಿ: High Court order: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
ತಾಲೂಕಿನ ಜನರೊಂದಿಗೆ ನಾವಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಮುಕ್ತವಾಗಿ ಪಾಲ್ಗೊಂಡು ಮತದಾನ ಮಾಡಿ ಎಂಬ ಸಂದೇಶವನ್ನು ಮಂಗಳವಾರ ಕಮಾಂಡೋಗಳು ರವಾನಿಸಿದರು. ಸಿಆರ್‌ಪಿಎಫ್, ಸಿಐಎಸ್‌ಎಫ್ ಹಾಗೂ ಎಸ್‌ಎಸ್‌ಬಿಯ ಒಟ್ಟು 500ಕ್ಕೂ ಅಧಿಕ ಸಿಬ್ಬಂದಿ (ಕಮಾಂಡೋಗಳು) ಶಸ್ತ್ರಧಾರಿಗಳಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸುವ ಮೂಲಕ ಸ್ಥಳೀಯರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಹಾಗೂ ವಿವಿಧ ಪಡೆಗಳ ಮುಖ್ಯಸ್ಥರು ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಗರದಲ್ಲಿ ನಡೆದ ಈ ಪಥ ಸಂಚಲನದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಯೂ ಹಾಜರಿದ್ದರು.