Site icon Vistara News

Tumkur News: ತಿರುಮಣಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Election of new President Vice President for Tirumani Gram Panchayat

ಪಾವಗಡ: ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ (Gram Panchayat) ನೂತನ ಅಧ್ಯಕ್ಷರಾಗಿ (President) ಕೆ.ಲೋಕೇಶ್ ಚೌದರಿ, ಉಪಾಧ್ಯಕ್ಷರಾಗಿ (Vice President) ಚಂದನ ಮುರಳಿ ಅವಿರೋಧವಾಗಿ ಆಯ್ಕೆಯಾದರು.

ತಿರುಮಣಿ ಗ್ರಾಮ ಪಂಚಾಯಿತಿಯು ಹತ್ತು ಜನ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಿಸಲಾತಿ ಇದ್ದು, ಎರಡನೇ ಅವಧಿಗೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕೆ.ಲೋಕೇಶ್ ಚೌಧರಿ ನಾಮಪತ್ರ ಸಲ್ಲಿಸಿದರೆ ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹನಮಂತರಾಯಪ್ಪ ಕೆ.ಲೋಕೇಶ್ ಚೌಧರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಉಪಾಧ್ಯಕ್ಷರಾಗಿ ಬಿ.ವಿ.ಚಂದನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಇದನ್ನೂ ಓದಿ: World Cup 2023 : ವಿಶ್ವಕಪ್ ತಂಡ ಸಲ್ಲಿಕೆಗೆ ಸೆ.5ಕ್ಕೆ ಗಡುವು; ರಾಹುಲ್​ ಲಭ್ಯತೆಯೇ ಸವಾಲು

ಈ ವೇಳೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಿನ್ನಯ್ಯ, ಮುಖಂಡರಾದ ಜಯರಾಂ, ಶರತ್ ಬಾಬು, ಅಶೋಕ್ , ಎವಿಪಿ ನಾಯ್ಡು, ನಾಗು, ಸುಧಾಕರ್, ಸಂಜೀವ್ ರೆಡ್ಡಿ, ನಾಗರಾಜ ರೆಡ್ಡಿ, ರಾಜಪ್ಪ, ಕೂನ್ನಯ್ಯ, ಪ್ರಭಾವತಿ, ಮಂಜುಳಾ, ಮಲ್ಲಕ್ಕ ಹಾಗೂ ಮುಖಂಡರಾದ ನಾನಿ, ಚನ್ನಕೇಶವ, ನಾಗರಾಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version