ಕೊರಟಗೆರೆ: ಪಟ್ಟಣದ ಹೊರವಲಯದ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದ ಹತ್ತಿರದಲ್ಲಿ ಅರಣ್ಯ ಇಲಾಖೆ (Forest Department) ವತಿಯಿಂದ ಸುಂದರ ವೃಕ್ಷೋದ್ಯಾನ (ಟ್ರೀ ಪಾರ್ಕ್) (Tree Park) ನಿರ್ಮಾಣವಾಗಿದೆ.
ಈ ವೃಕ್ಷೋದ್ಯಾನ ವನದಲ್ಲಿ ವಿವಿಧ ತಳಿಯ 78 ಜಾತಿಯ ಕ್ಯಾಕ್ಟಸ್ ಮತ್ತು 50 ಜಾತಿಯ ಗಿಡಗಳನ್ನು , 25 ಜಾತಿಯ ಔಷಧೀಯ ಗಿಡಗಳನ್ನು ನೆಡಲಾಗಿದೆ. ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ, ವಾಯುವಿಹಾರಕ್ಕೆ ಬಂದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: Costly Mango: ಟೊಮ್ಯಾಟೊಗೊಂದು ಕಾಲ, ಮಾವಿಗೊಂದು ಕಾಲ; ಈ ರೈತ ಬೆಳೆಯುವ ಕೆ.ಜಿ ಮಾವಿಗೆ ಇಷ್ಟು ಲಕ್ಷ ರೂ.!
ಸುಂದರವಾಗಿ ನಿರ್ಮಾಣವಾಗಿರುವ ಈ ವೃಕ್ಷೋದ್ಯಾನ ವನವು ಎಲ್ಲರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಇದನ್ನೂ ಓದಿ: IND vs WI 1st ODI: ಹೊಸ ಜೆರ್ಸಿಯಲ್ಲಿ ಕಂಗೊಳಿಸಿದ ಟೀಮ್ ಇಂಡಿಯಾ ಆಟಗಾರರು
ವೃಕ್ಷೋದ್ಯಾನದ ಉದ್ಘಾಟನಾ ಕಾರ್ಯಕ್ರಮವನ್ನು ಗೃಹ ಸಚಿವರು , ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಜು. 28 ರಂದು ಚಾಲನೆ ನೀಡಲಿದ್ದಾರೆ, ಸಮಾರಂಭದಲ್ಲಿ ಗಣ್ಯರು, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ.