Site icon Vistara News

Tumkur News: ತಿರುಮಣಿ ಗ್ರಾಮ ಪಂಚಾಯತಿ ನೂತನ ಸದಸ್ಯರಾಗಿ ಕಲಕಂದಪ್ಪ ಆಯ್ಕೆ

Kalakandappa elected as new member of Tirumani Gram Panchayat at Pavagada

ಪಾವಗಡ: ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿಯಲ್ಲಿ (Tirumani Gram Panchayat) ಖಾಲಿಯಿದ್ದ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಕಲಕಂದಪ್ಪ ನೂತನ ಸದಸ್ಯರಾಗಿ (New Member) ಆಯ್ಕೆಯಾದರು.

ಚುನಾವಣೆಗೆ ಮೂವರು ಅಭ್ಯರ್ಥಿಗಳಾದ ಕಲಕಂದಪ್ಪ, ಅಕ್ಕಲಪ್ಪ ಹಾಗೂ ಮಹಿಳಾ ಅಭ್ಯರ್ಥಿ ಗಂಗಮ್ಮ ಸ್ಪರ್ಧಿಸಿದ್ದರು. ಆದರೆ ಅಭ್ಯರ್ಥಿ ಕಲಕಂದಪ್ಪ 261 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಚುನಾವಣಾ ಅಧಿಕಾರಿಯಾಗಿ ಕರಿಯಣ್ಣ ಬಿ.ಎಂ. ಕಾರ್ಯ ನಿರ್ವವಹಿಸಿದರೆ, ಸಹಾಯಕ ಚುನಾವಣಾ ಅಧಿಕಾರಿಯಾಗಿ ವೆಂಕಟೇಶ್ ಕುಮಾರ್ ಕಾರ್ಯ ನಿರ್ವಹಿಸಿದರು.

ಇದನ್ನೂ ಓದಿ: IND vs WI 1st ODI: ಭಾರತಕ್ಕೆ ಸಡ್ಡು ಹೊಡೆದೀತೆ ವಿಂಡೀಸ್​?

ಇದೇ ವೇಳೆ ನೂತನ ಸದಸ್ಯರಾಗಿ ಆಯ್ಕೆಯಾದ ಕಲಕಂದಪ್ಪ ಅವರಿಗೆ ತಿರುಮಣಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಚೌಧರಿ, ಮುಖಂಡರಾದ ನಾನಿ, ಟಿ.ಎಸ್.ಶ್ರೀನಿವಾಸ್, ಶರತ್ ಕುಮಾರ್, ಅಶೋಕ್, ಸಂಜೀವ್ ರೆಡ್ಡಿ, ನಾಗಭೂಷಣ, ಎನ್.ಶ್ರೀನಿವಾಸ್, ಕೆ.ವಿ.ಶಿವಕುಮಾರ್, ಕೆ.ಸಂಜೀವ್, ಕೆ.ವಿ.ಚಲಪತಿ ಅಭಿನಂದಿಸಿದರು.

Exit mobile version