ಶಿರಾ: ಅಡಿಕೆ ಗಿಡಗಳನ್ನು (Nut Plants) ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲೂಕಿನ ಗಿಣ್ಣಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ. ತಾಲೂಕು ಬುಕ್ಕಾಪಟ್ಟಣ ಹೋಬಳಿ ಗಿಣ್ಣಪ್ಪನಹಟ್ಟಿ ಗ್ರಾಮದಲ್ಲಿ ಯರದಕಟ್ಟೆ ಸರ್ವೆ ನಂಬರ್ 19 ರಲ್ಲಿ ಹನುಮಂತಯ್ಯ ಮತ್ತು ಜಯಮ್ಮ ದಂಪತಿಗೆ ಸೇರಿದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.
ಕಳೆದ ಎರಡು ವರ್ಷದಿಂದ ತುಂಬಾ ಶ್ರಮವಹಿಸಿ ಅಡಿಕೆ ಗಿಡ ಬೆಳೆಸಿದ್ದರು. ಅದರೆ ಸುಮಾರು 400ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದನ್ನು ಕಂಡು ಹನುಮಂತಯ್ಯ ಮತ್ತು ಜಯಮ್ಮ ದಂಪತಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: Video Viral : ಹಾವನ್ನು ಅಟ್ಟಾಡಿಸಿ ಕಚ್ಚಿದ ನಾಯಿ, ಹೆಡೆ ಎತ್ತಿ ವಿಷ ಕಕ್ಕಿದ ನಾಗರ; ಇಲ್ಲಿದೆ ರೋಚಕ ವಿಡಿಯೊ!
ಸುಮಾರು 1100 ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ಸುಮಾರು 400 ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಕಿಡಿಗೇಡಿಗಳ ಕೃತ್ಯದಿಂದ ರೈತರ ಮೂರು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದುಬಂದಿದೆ. ಬುಕ್ಕಾಪಟ್ಟಣ ಉಪಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ.