ಶಿರಾ: ನಗರದಲ್ಲಿ ಬಾಲ ಕಾರ್ಮಿಕ (Child Labour) ಮತ್ತು ಕಿಶೋರ ಕಾರ್ಮಿಕರನ್ನು ನೇಮಿಸಿಕೊಂಡ ವಿವಿಧ, ಗ್ಯಾರೇಜ್, ವಾಣಿಜ್ಯ ಸಂಸ್ಥೆಗಳ ಮೇಲೆ ಅಧಿಕಾರಿಗಳ (Officers) ತಂಡವು ಅನಿರೀಕ್ಷಿತ ಕಾರ್ಯಾಚರಣೆ ನಡೆಸಿ, ಏಳು ಬಾಲಕಾರ್ಮಿಕರನ್ನು ರಕ್ಷಿಸಿದೆ.
ಶಿರಾದ ಪ್ರಭಾರಿ ತಹಸೀಲ್ದಾರ್ ನಾಗಮಣಿ ಅವರ ನೇತೃತ್ವದಲ್ಲಿ ಇಲಾಖೆಗಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 380 ರೂ. ಏರಿಕೆ, ಬೆಳ್ಳಿ 1000 ರೂ. ತುಟ್ಟಿ
ರಕ್ಷಿಸಲಾದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಆರೋಪಿಗಳ ವಿರುದ್ಧ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳನ್ನು ಜಿಲ್ಲಾ ಬಾಲ ಭವನಕ್ಕೆ ಮತ್ತು ವಿದ್ಯಾಭ್ಯಾಸ ಮಾಡಿಸಲು ಕಳುಹಿಸಿದ್ದಾರೆ.