Site icon Vistara News

Tumkur News: ಮೂಲ ಸೌಕರ್ಯ ಕಲ್ಪಿಸಲು ಶಿರಾದ ಕೇಶವ ನಗರ ನಿವಾಸಿಗಳ ಒತ್ತಾಯ

Drainage water not flowing properly in Keshav Nagar

ಶಿರಾ: ಮೂಲ ಸೌಕರ್ಯಗಳಿಲ್ಲದೇ (infrastructure) ಶಿರಾ (Shira) ನಗರಸಭೆಯ 30ನೇ ವಾರ್ಡ್ ವ್ಯಾಪ್ತಿಯ ಕೇಶವ ನಗರದ (Keshav Nagar) ನಿವಾಸಿಗಳು ನಿತ್ಯವೂ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಖಾಲಿ ನಿವೇಶನಗಳಲ್ಲಿ ಚರಂಡಿ ನೀರು ಸಂಗ್ರಹ

ಚರಂಡಿ ನೀರು ಸರಿಯಾಗಿ ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಖಾಲಿ ನಿವೇಶನಗಳಲ್ಲಿ ಕೊಳಕು ನೀರು ಸಂಗ್ರಹವಾಗುತ್ತಿರುವುದರಿಂದ ದುರ್ವಾಸನೆ ಹೆಚ್ಚಿದೆ, ಇದರ ಜತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಂಜೆಯಾದ ಕೂಡಲೇ ಸೊಳ್ಳೆಗಳು ಮನೆಯೊಳಗೆ ನುಗ್ಗುತ್ತವೆ ಇದರಿಂದ ರೋಗಗಳು ಹರಡುವ ಭೀತಿಯಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಇನ್ನು ನಗರದಲ್ಲಿ ಸಂಗ್ರಹವಾಗುವ ಕಸದ ವಿಲೇವಾರಿಯು ಆಗದಿರುವ ಹಿನ್ನಲೆಯಲ್ಲಿ ಸ್ವಚ್ಛತೆ ಎಂಬುದೇ ಮಾಯವಾಗಿದೆ. ಎಲ್ಲೆಂದರಲ್ಲಿ ಮನೆಗಳ ತ್ಯಾಜ್ಯವೇ ನಗರದಲ್ಲಿ ಕಂಡುಬರುತ್ತಿದೆ.

ಇದನ್ನೂ ಓದಿ: Gruha jyothi Scheme : ಇನ್ನೂ ಫ್ರೀ ಕರೆಂಟ್ ಮಾಡ್ಕೊಂಡಿಲ್ವಾ? ಎರಡೇ ನಿಮಿಷದಲ್ಲಿ ಅಪ್ಲೈ ಮಾಡಿ

ಘನತ್ಯಾಜ್ಯ ಸಂಗ್ರಹಿಸಲು, ಚರಂಡಿ ಹೂಳು ತೆಗೆಯಲು ಮತ್ತು ರಸ್ತೆ ಸ್ವಚ್ಛತೆಗೆ ಅಗತ್ಯವಿರುವ ಕಾಂಪ್ಯಾಕ್ಟರ್‌ಗಳು, ಟ್ರ್ಯಾಕ್ಟರ್, ಸಕ್ಕಿಂಗ್ ವಾಹನಗಳು, ಮತ್ತಿತರ ವಿಶೇಷ ಯಂತ್ರಗಳು ಅಷ್ಟೇ ಅಲ್ಲ ಬಡಾವಣೆಗಳಿಂದ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಲು ಕೆಲವು ಪ್ರದೇಶಗಳಿಗೆ ಮಾತ್ರ ನಗರಸಭೆ ಸೀಮಿತವಾಗಿದೆ.

ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳು

ಇನ್ನು ನಗರದಲ್ಲಿರುವ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ದಿನನಿತ್ಯ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಅಲ್ಲದೇ ಮಳೆ ಬಂದರೆ ವಾಹನ ಸಂಚಾರವಿರಲಿ, ನಡೆದಾಡುವುದು ಕಷ್ಟವಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.

ನಗರದಲ್ಲಿ ಹಂದಿ, ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ, ಇದರಿಂದ ಹಂದಿ, ಮತ್ತು ಬೀದಿ ನಾಯಿಗಳ ಆವಾಸಸ್ಥಾನವಾಗಿ ರೂಪಗೊಂಡಿದೆ.

ಶಿರಾದ ಕೇಶವ ನಗರದಲ್ಲಿ ಹಂದಿಗಳ ಕಾಟ ವಿಪರೀತವಾಗಿರುವುದು.

ಇದನ್ನೂ ಓದಿ: Koppala News: ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ: 7 ಜನ ಆರೋಪಿಗಳ ಬಂಧನ; 15.31 ಲಕ್ಷ ವಶ

ಕೇಶವ ನಗರಕ್ಕೆ ಕೂಡಲೇ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಸ್ಥಳೀಯ ನಿವಾಸಿಗಳಾದ ಹಮಾನಾಯ್ಕ್, ಶೋಭಾ ಹಾಗೂ ಇತರರು ಒತ್ತಾಯಿಸಿದ್ದಾರೆ.

Exit mobile version