Site icon Vistara News

Tumkur News: ರಾಜ್ಯದ ಪ್ರಥಮ ಅತ್ಯಾಧುನಿಕ ಕುರಿ ಮತ್ತು ಮೇಕೆ ವಧಾಗಾರ ಉದ್ಘಾಟನೆ ಯಾವಾಗ?

States first modern sheep and goat slaughterhouse at shira

ಶಿರಾ: ತಾಲೂಕಿನ ತಾವರೆಕೆರೆ ಬಳಿ ರಾಜ್ಯದಲ್ಲೇ ಪ್ರಥಮ ಅತ್ಯಾಧುನಿಕ ಕುರಿ ಮತ್ತು ಮೇಕೆ ವಧಾಗಾರ (Sheep and goat slaughterhouse) ಮತ್ತು ಮಾಂಸ (Meat) ಸಂಸ್ಕರಣ ಘಟಕದ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಇನ್ನೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ!

ಗೌಡಗೆರೆ ಹೋಬಳಿಯ ಬಹುತೇಕ ಭಾಗಗಳಲ್ಲಿ ಕಾಡುಗೊಲ್ಲ ಸಮುದಾಯದ ಜನರು ಹೆಚ್ಚಿದ್ದು ಕುರಿ ಸಾಕಾಣಿಕೆ ಇವರ ಕುಲಕಸುಬಾಗಿದ್ದನ್ನು ಅರಿತು 2017 ರಲ್ಲಿ ಅಂದಿನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರು ಆಗಿದ್ದ ಸದ್ಯ ಹಾಲಿ ಶಾಸಕ ಟಿ.ಬಿ. ಜಯಚಂದ್ರ ಅವರ ಅವಧಿಯಲ್ಲಿ ತಾವರೆಕೆರೆ ಬಳಿ ರಾಜ್ಯದಲ್ಲಿ ಪ್ರಥಮವಾದ ಅತ್ಯಾಧುನಿಕ ಕುರಿ ಮತ್ತು ಮೇಕೆ ವಧಾಗಾರ ಮತ್ತು ಮಾಂಸ ಸಂಸ್ಕರಣ ಘಟಕವನ್ನು ಸುಮಾರು 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಿ ಸುಮಾರು ಕಾಮಗಾರಿ ಮುಗಿದು ವರ್ಷಗಳೇ ಕಳೆದರು ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ

ಇದನ್ನೂ ಓದಿ: Electric Shock: ಜಮೀನಿಗೆ ಹೋಗಿದ್ದಾಗ ವಿದ್ಯುತ್‌ ಆಘಾತ; ತಂದೆ, ಮಗಳು ದಾರುಣ ಮೃತ್ಯು

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಸಾರ್ವಜನಿಕ ತೆರಿಗೆ ರೂಪದ ಹಣ ಸರಕಾರದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅನುದಾನ ತುಕ್ಕು ಹಿಡಿಯುತ್ತಿದೆ, ಸುಮಾರು 20 % ಕಾಮಗಾರಿ ಮತ್ತು ಮಿಷನರಿ ಸೌಕರ್ಯ ಒದಗಿಸದೆ ಅದನ್ನು ನೆನೆಗುದಿಗೆ ತಳ್ಳಿ ಹಾಕಿರುವುದು ದುರಂತದ ಸಂಗತಿಯಾಗಿದೆ ಎಂಬುದು ಸಾರ್ವಜನಿಕ ಆಕೋಶವಾಗಿದೆ.

ಈ ಘಟಕದಿಂದ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲವಾಗುತ್ತದೆ ಮತ್ತು ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂಬ ಜನರ ನಿರೀಕ್ಷೆ ಇನ್ನೂ ಈಡೇರಿಲ್ಲ
ಕಟ್ಟಡ ಕಾಮಗಾರಿ ಪೂರ್ಣವಾಗಿ ಕುರಿ ಮತ್ತು ಉಣೆ ನಿಗಮದ ಸುಪರ್ದಿಗೆ ನೀಡಬೇಕು ಅದರೆ ನೂತನ ಕಟ್ಟಡ ಸದ್ಯಕ್ಕಂತೂ ಉದ್ಘಾಟನೆ ಭಾಗ್ಯ ಕಾಣುವ ಲಕ್ಷಣ ಕಾಣುತ್ತಿಲ್ಲ.

ಇದನ್ನೂ ಓದಿ: Food Poisoning : ಹಲ್ಲಿ ಬಿದ್ದ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥ: ಹಲ್ಲಿ ಅಲ್ಲ, ಚಿಕ್ಕ ಹುಳುವೆಂದು ಪ್ರಾಚಾರ್ಯರ ವಾದ!

ಹಾಲಿ ಶಾಸಕ ಟಿ.ಬಿ.ಜಯಚಂದ್ರ ಅವರು ತಮ್ಮ ಹಿಂದಿನ ಅವಧಿಯ ಸರ್ಕಾರದ ಕಟ್ಟಡಕ್ಕೆ ಮರುಜೀವ ನೀಡಿ. ಉದ್ಘಾಟನೆಯ ಏರ್ಪಾಡು ನಡೆಸಲು ಮುಂದಾಗುವರೆ ಕಾದು ನೋಡಬೇಕಿದೆ.

Exit mobile version