Site icon Vistara News

Tumkur News: ಶಿರಾದ ಹುಳಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

Vanamahotsav program at Huligere High School in Shira

ಶಿರಾ: ತಾಲೂಕಿನ ಮದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಗೆರೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆಯ (Forest department) ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು (Vanamahotsava program) ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಪರಿಸರ ಸಂರಕ್ಷಣೆ ಈಗಿರುವ ಮಾರ್ಗವಾಗಿದೆ ಎಂದರು.

ಇದನ್ನೂ ಓದಿ: ind vs wi : ಭಾರತ ವಿರುದ್ಧ ಟೆಸ್ಟ್​ ಸರಣಿಗೆ ತಂಡ ಘೋಷಿಸಿದ ವಿಂಡೀಸ್​; ಯಾರ್ಯಾರು ಇದ್ದಾರೆ ತಂಡದಲ್ಲಿ?

ಪ್ರತಿಯೊಬ್ಬ ವಿದ್ಯಾರ್ಥಿ ಒಂದೊಂದು ಸಸಿ ಪೋಷಣೆ ಮಾಡಿದರೆ ಅದು ಮರವಾಗಿ ಬೆಳೆದು ಫಲವತ್ತತೆ ಹೆಚ್ಚುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.

ಅರಣ್ಯ ಇಲಾಖೆ ಅಧಿಕಾರಿ ನವನೀತ್ ಮಾತನಾಡಿ, ಹಸಿರೀಕರಣ ಯೋಜನೆ ಅಡಿಯಲ್ಲಿ ಶಾಲೆ, ಸರ್ಕಾರಿ ಕಚೇರಿ ಆವರಣ, ಸ್ಮಶಾನ, ಉದ್ಯಾನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಗಿಡ, ಮರ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.

ಇದನ್ನೂ ಓದಿ: Electric Shock: ಜಮೀನಿಗೆ ಹೋಗಿದ್ದಾಗ ವಿದ್ಯುತ್‌ ಆಘಾತ; ತಂದೆ, ಮಗಳು ದಾರುಣ ಮೃತ್ಯು

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version