ಶಿರಾ: ತಾಲೂಕಿನ ಇತಿಹಾಸ ಪ್ರಸಿದ್ದ ಕಳುವರಹಳ್ಳಿ ಗ್ರಾಮದ ಜುಂಜಪ್ಪನ ಗುಡ್ಡೆಯ ಜುಂಜಪ್ಪನ ದೇವಾಲಯದಲ್ಲಿ ದುಷ್ಕರ್ಮಿಗಳು ನಂದಿವಿಗ್ರಹ ಸುತ್ತಲೂ ಅಗೆದು ನಿಧಿ ಶೋಧನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಇತಿಹಾಸ ಪ್ರಸಿದ್ಧವಾದ ಈ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ದುಷ್ಕರ್ಮಿಗಳು ಹೊಂಚು ಹಾಕಿ ನಿಧಿ ಶೋಧನೆಗಾಗಿ ನಂದಿವಿಗ್ರಹ ಸುತ್ತಲೂ ಅಗೆದು ನಿಧಿ ಶೋಧಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Indonesia Open: ಶ್ರೀಕಾಂತ್ಗೆ ಗೆಲುವು; ಸೋತು ನಿರ್ಗಮಿಸಿದ ಸಿಂಧು, ಲಕ್ಷ್ಯ ಸೇನ್
ಕಾಡುಗೊಲ್ಲ ಸಮುದಾಯದ ಆರಾಧ್ಯ ದೇವರಾದ ಜುಂಜಪ್ಪನ ದೇವಾಲಯಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಭಕ್ತಾಧಿಗಳು ಆಗಮಿಸಿ, ಪೂಜೆ ಸಲ್ಲಿಸುತ್ತಿದ್ದರು.
ನಿಧಿ ಶೋಧನೆಗಾಗಿ ಗುಂಡಿ ತೊಡುವಾಗ ಮೂರು ಹಾವುಗಳನ್ನು ಹೊಡೆದು ಹಾಕಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.