ಶಿರಾ: ತಾಲೂಕಿನ ಹುಲಿಕುಂಟೆ ಹೋಬಳಿಯ ವೀರಬೊಮ್ಮನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ದಿಬ್ಬದ ಶ್ರೀ ವೀರ ಬೊಮ್ಮಣ್ಣ ಸ್ವಾಮಿ ಜಾತ್ರಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಂಜಾವಧೂತ ಸ್ವಾಮೀಜಿ ಅವರು ಭಕ್ತರ ಕನಸು ಶೀಘ್ರವಾಗಿ ಸಾಕಾರಗೊಳ್ಳಲಿ ಎಂದು ಆಶೀರ್ವದಿಸಿದರು.
ವೀರ ಬೊಮ್ಮಣ್ಣ ಸ್ವಾಮಿ ಬಗ್ಗೆ ಮಾತನಾಡಿದ ಸ್ವಾಮೀಜಿ, “ದಿಬ್ಬದ ಶ್ರೀ ವೀರ ಬೊಮ್ಮಣ್ಣ ಸ್ವಾಮಿ ಚರಿತ್ರೆ ವೈವಿಧ್ಯತೆ ಹಾಗೂ ಪವಾಡಗಳಿಂದ ಕೂಡಿದೆ. ಮುಗ್ಧ ಮತ್ತು ವಿಶಾಲ ಮನೋಭಾವ ಹೊಂದಿರುವ ವೀರ ಬೊಮ್ಮಣ್ಣ ಸ್ವಾಮಿಯವರು ಭಕ್ತರು, ಯಜಮಾನ, ಬಂಡಿಕಾರ, ಪೂಜಾರರು, ಕೂಲಕಾರರನ್ನು ವಿಶ್ವಾಸದಿಂದ ನಡೆಸಿಕೊಳ್ಳುವ ಮೂಲಕ ಭಕ್ತರ ಮನಸ್ಸಿನಲ್ಲಿ ಸದಾಕಾಲಕ್ಕೂ ನೆನಪಿನಲ್ಲಿ ಉಳಿದವರು” ಎಂದು ತಿಳಿಸಿದರು.
ಇದನ್ನೂ ಓದಿ: Dharma Dangal : ಬೇಲೂರು ಚನ್ನಕೇಶವ ಜಾತ್ರೆಯಲ್ಲಿ ಕುರಾನ್ ಪಠಣಕ್ಕೆ ಅವಕಾಶ; ರಥದ ಬದಲು ದೇವಳದ ಮೆಟ್ಟಿಲ ಮೇಲೆ
ನೂರಾರು ಗ್ರಾಮಗಳ ಸಹಸ್ರಾರು ಭಕ್ತರು ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ್ದು, ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತುಮುಲ್ ನಿದರ್ಶಕ ಎಸ್.ಆರ್.ಗೌಡ, ತಾಲೂಕು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಆರ್.ಉಗ್ರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಮಕೃಷ್ಣಪ್ಪ, ಹಿರಿಯ ಮುಖಂಡರಾದ ಕಲ್ಕೆರೆ ರವಿಕುಮಾರ್ ಹಾಗೂ ಊರಿನ ಹಿರಿಯ ಕಿರಿಯ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.