Site icon Vistara News

ಬೆಂಗಳೂರಿನಲ್ಲಿ ಮಾರ್ಚ್‌ 12ರಿಂದ ಎರಡು ದಿನಗಳ ಶಿಲ್ಪವಿದ್ಯಾ ಸಮುಚ್ಚಯ ಸಮ್ಮೇಳನ

Two-day Silpavidya Samucchaya Sammelan to be held in Bengaluru

Two-day Silpavidya Samucchaya Sammelan to be held in Bengaluru

ಬೆಂಗಳೂರು: ದಿ ಮಿಥಿಕ್ ಸೊಸೈಟಿಯು ಹಾಗೂ ಚಂದನ ಆರ್ಟ್ ಫೌಂಡೇಶನ್ ಇಂಟರ್‌ನ್ಯಾಷನಲ್‌ ಸಹಯೋಗದೊಂದಿಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಶಿಲ್ಪವಿದ್ಯಾ ಸಮುಚ್ಚಯ ಹೆಸರಲ್ಲಿ ಪ್ರಾಚೀನ ಭಾರತೀಯ ಸಾಂಪ್ರದಾಯಿಕ ಶಿಲ್ಪಶಾಸ್ತ್ರ ಸಂಸ್ಕೃತಿ ವಿಷಯಕ್ಕೆ ಸಂಬಂಧಿಸಿದಂತೆ ಸಮ್ಮೇಳನ ಇರಲಿದೆ.

ಮಾರ್ಚ್‌ 11 ಮತ್ತು 12ರಂದು ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಭವನದಲ್ಲಿ ಆಯೋಜಿಸಿಲಾಗಿದೆ. ಯದುಗಿರಿ ಮಠದ 41ನೇ ಪೀಠಾಧಿಪತಿ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಶಿಲ್ಪ ಗುರುಕುಲಗಳ ಕೇಂದ್ರದ ಡೀನ್ ಡಾ. ಜಿ. ಜ್ಞಾನಾನಂದ, ಮಿಥಿಕ್ ಸೊಸೈಟಿಯ ಅಧ್ಯಕ್ಷ ಪ್ರೊ.ಕೆ.ನರಹರಿ, ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್ ಮತ್ತು ಚಂದನ ಆರ್ಟ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ತಳೂರು ವೆಂಕಟೇಶ್ ಭಾಗಿಯಾಗಲಿದ್ದಾರೆ. ವಿಚಾರ ಸಂಕಿರಣದ ಸಮಾರೋಪ ಸಮಾರಂಭವು ಮಾರ್ಚ್‌ 12ರಂದು ನಡೆಯಲಿದೆ. ಅಂದು ಮಧ್ಯಾಹ್ನ 03.45ಕ್ಕೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ವಿ.ಅನುರಾಧ ಭಾಗಿಯಾಗಲಿದ್ದಾರೆ.

ಸಮ್ಮೇಳನದ ಉದ್ದೇಶವೇನು?

ಪ್ರಾಚೀನ ಭಾರತದ ಸಾಂಪ್ರದಾಯಿಕ ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳು (ಮಾನಸಾರ, ಕಾಶ್ಯಪಶಿಲ್ಪಶಾಸ್ತ್ರ, ಮಾಯಮತ, ಶಿಲ್ಪರತ್ನ, ಬ್ರಹ್ಮಿಯ ಚಿತ್ರಕರ್ಮಶಾಸ್ತ್ರ, ಸರಸ್ವತಿಯ ಚಿತ್ರಕರ್ಮಶಾಸ್ತ್ರ, ಶ್ರೀತತ್ವನಿಧಿ ಇತ್ಯಾದಿ) ಬಗ್ಗೆ ತಿಳಿಸುವುದು ಪ್ರಾಚೀನ ಭಾರತೀಯ ಸಾಂಪ್ರದಾಯಿಕ ಶಿಲ್ಪಶಾಸ್ತ್ರ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: 2nd PU Exam 2023: ಬೆಳಗಾವಿ, ಯಾದಗಿರಿಯ ಇಬ್ಬರು ವಿದ್ಯಾರ್ಥಿಗಳು ಡಿಬಾರ್‌; ಹೇಗಿತ್ತು ಮೊದಲ ದಿನದ ದ್ವಿತೀಯ ಪಿಯು ಪರೀಕ್ಷೆ?

ಶಿಲ್ಪರಚನೆ, ಭಾವಸ್ಪುರಣ, ಶಿಲ್ಪ ಆಂಗಿಕಸೌಂದರ್ಯ, ಅಂಗಬಂಗಿಗಳು, ಅಲಂಕಾರಿಕ ಆಭರಣಗಳು, ಕುಸುರಿ ಕೆಲಸದ ವೈಶಿಷ್ಟ್ಯತೆ, ಶಿಲ್ಪಕಲೆಯ ಹಿಂದಿರುವ ವಿಜ್ಞಾನ, ಕಲೆ, ಶಿಸ್ತು, ಕರಕುಶಲತೆ, ಶ್ರದ್ಧೆ, ಶ್ರಮ, ಕಿರೀಟಗಳು, ಕೇಶ ವಿನ್ಯಾಸ, ಅಲಂಕಾರ, ಮುದ್ರಾವಿನ್ಯಾಸ, ಚಿಹ್ನೆಗಳು ಸೇರಿದಂತೆ ಸಂಕೇತಗಳು, ಪೀಠಗಳು, ವಾಹನಗಳು – ಪ್ರಾಣಿ ಮತ್ತು ಪಕ್ಷಿಗಳ ಪ್ರಾತಿನಿಧ್ಯಗಳು, ಆಯುಧಗಳು ಮತ್ತು ಇತರ ವಸ್ತುಗಳು; ತಾಂತ್ರಿಕ ಪದಗಳು, ಉಪಕರಣಗಳು ಮತ್ತು ತಂತ್ರಗಳು, ಬಳಸುವ ವಸ್ತು, ಸಾಮಗ್ರಿಗಳು, ಕೆತ್ತನೆ ವಿಧಾನಗಳ ಬಗ್ಗೆ ಯುವ ಶಿಲ್ಪಿಗಳಿಗೆ ಪರಿಚಯಿಸಿ ಮಾರ್ಗದರ್ಶನ ನೀಡಿ, ಸಂವಾದವನ್ನು ಪ್ರಸ್ತುತಪಡಿಸವ ಉದ್ದೇಶವನ್ನೂ ಈ ಸಮ್ಮೇಳನ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version