Site icon Vistara News

Udupi News : ಅನ್‌ಲೋಡ್‌ ಮಾಡುವಾಗ ಗ್ರಾನೈಟ್‌ ಅಡಿ ಸಿಲುಕಿ ಕಾರ್ಮಿಕರು ಮೃತ್ಯು!

Workers die after getting stuck under granite while unloading

ಬೆಂಗಳೂರು: ಉಡುಪಿ ಜಿಲ್ಲೆಯ (Udupi News) ಮಲ್ಪೆ ಸಮೀಪದ ತೊಟ್ಟಂ ಸಮೀಪ ಗ್ರಾನೈಟ್ ಅನ್‌ಲೋಡ್ ಮಾಡುವಾಗ ಅವಘಡವೊಂದು (Accident News) ನಡೆದಿದೆ. ಭಾರಿ ಗಾತ್ರದ ಗ್ರಾನೆಟ್ ಅನ್‌ಲೋಡ್‌ ಮಾಡುವಾಗ ಕಾರ್ಮಿಕರು ಗ್ರಾನೆಟ್ ಅಡಿ ಸಿಲುಕಿದ್ದಾರೆ. ಹೊರಬರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಮಿಕರಿಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Domestic Violence : ಹೆಂಡತಿ ಕಾಟ ತಾಳಲಾಗದೆ Metro ಎಂಜಿನಿಯರ್‌ ಆತ್ಮಹತ್ಯೆ ; ನೀನೊಬ್ಬ ಹಳ್ಳಿ ಗುಗ್ಗು ಅಂತಿದ್ಲಂತೆ!

ಬಾಗಮತಿ ನದಿಯಲ್ಲಿ ದೋಣಿ ದುರಂತ; ಶಾಲೆಗೆ ಹೋಗುತ್ತಿದ್ದ 18 ಮಕ್ಕಳು ನೀರುಪಾಲು?

ಬಿಹಾರದ ಮುಜಾಫರ್‌ಪುರದಲ್ಲಿ ಗುರುವಾರ (ಸೆಪ್ಟೆಂಬರ್ 14) ಬೆಳಗ್ಗೆ ಭಾರಿ ದೋಣಿ ಅಪಘಾತ (Boat Mishap) ಸಂಭವಿಸಿದೆ. ಶಾಲಾ ಮಕ್ಕಳಿದ್ದ ದೋಣಿಯೊಂದು ಬಾಗಮತಿ ನದಿಯಲ್ಲಿ (river bagmati) ಮುಳುಗಿದೆ. 18 ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.

ದೋಣಿಯಲ್ಲಿ ಸುಮಾರು 34 ಮಕ್ಕಳು ಇದ್ದರು ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಸುಮಾರು 20 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ನಿಖರ ಅಂಕಿಅಂಶಗಳು ದೊರೆತಿಲ್ಲ. ಹೀಗಾಗಿ ಸುಮಾರು 18 ಮಂದಿ ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮಕ್ಕಳು ಸ್ಥಳೀಯ ಗ್ರಾಮದಿಂದ ನದಿಯಾಚೆಗಿನ ಶಾಲೆಗೆ ತೆರಳುತ್ತಿದ್ದರು.

ಬೆನಿಯಾಬಾದ್ ಒಪಿ ಪ್ರದೇಶದ ಭಟ್ಗಾಮಾ ಗ್ರಾಮದ ಮಧುರಪಟ್ಟಿ ಘಾಟ್ ಬಳಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ನಡೆಸಲಾಗುತ್ತಿದೆ. SDRF ತಂಡ ಸ್ಥಳಕ್ಕೆ ತಲುಪಿದೆ. ಸ್ಥಳೀಯ ಮುಳುಗುಗಾರರು ಕೂಡ ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನಷ್ಟು ವಿವರಗಳು ದೊರೆಯಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version