ಉಡುಪಿ: ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ರವರು ಬಿಜೆಪಿಗೆ ಸೇರ್ಪಡೆ ಅಗುತ್ತಿರುವ ಬೆನ್ನಲ್ಲೇ ಉಡುಪಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದ್ದಾರೆ.
ಈ ಹಿಂದೆ ಸಿದ್ದಾರಾಮಯ್ಯ ಸರ್ಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಮಧ್ವರಾಜ್. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ತಲುಪಿಸಿದ್ದು, ಹಲವಾರು ದಿನಗಳಿಂದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆಯುವ ಸೂಚನೆ ಕೂಡ ಇತ್ತು.
ಇದನ್ನೂ ಓದಿ : JDSಗೆ ಟಕ್ಕರ್ ನೀಡಲು ಮುಂದಾದ ಲಕ್ಷ್ಮೀ ಅಶ್ವಿನ್‌ಗೌಡ: ಇಂದು BJP ಸೇರ್ಪಡೆ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದು ಮಧ್ವರಾಜ್ ಸೋತಿದ್ದರು. ಮಧ್ವರಾಜ್ ಈ ನಡೆಗೆ ಜಿಲ್ಲಾ ಕಾಂಗ್ರೆಸ್ ನಲ್ಲಿಯೇ ಸಾಕಷ್ಟು ಅಪಸ್ವರಗಳು ಕೂಡ ಕೇಳಿ ಬಂದಿತ್ತು. ಬಿಜೆಪಿ ಸೇರ್ಪಡೆಗೂ ಸ್ಥಳೀಯ ಘಟಕದಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಎರಡು ಮೂರು ದಿನಗಳ ಹಿಂದೆಯಷ್ಟೆ ಮಧ್ವರಾಜ್ ಬಿಜೆಪಿ ಸೇರಲು ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಕಾಂಗ್ರೆಸ್‌ಗೆ ರಾಜಿನಾಮೆ ನೀಡುವ ಮೂಲಕ ಬಿಜೆಪಿ ಸೇರುವ ವದಂತಿಗೆ ತೆರೆ ಎಳೆದಿದ್ದಾರೆ ಮಧ್ವರಾಜ್.
ಇದನ್ನೂ ಓದಿ : ಸಚಿವ ಅಶ್ವತ್ಥನಾರಾಯಣ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಹೆಚ್.ಡಿ. ಕುಮಾರಸ್ವಾಮಿ