ಉಡುಪಿ: ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ್ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ಹಾಕೈ ಅಕ್ಷಯ್ ಮಚೀಂದ್ರ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎನ್. ವಿಷ್ಣುವರ್ಧನ್ ಅವರನ್ನು ಬೆಂಗಳೂರಿನ ಇಂಟಲಿಜೆನ್ಸ್ ವಿಭಾಗದ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ದಕ್ಷ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಎನ್. ವಿಷ್ಣುವರ್ಧನ್, ಜಿಲ್ಲೆಯ ಹಲವಾರು ಹೈ ಪ್ರೊಫೈಲ್ ಪ್ರಕರಣಗಳನ್ನು ಭೇದಿಸಿದ್ದರು.
ಜಿಲ್ಲೆಯ ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಅಕ್ಷಯ್ ಮಚೀಂದ್ರ 2005ರಲ್ಲಿ ಐಪಿಎಸ್ ಸೇವೆಗೆ ಸೇರಿದ್ದಾರೆ. ಈ ಹಿಂದೆ ಅಂದರೆ 2020 ರಲ್ಲಿ ಅಕ್ಷಯ್ ಮಚೇಂದ್ರರನ್ನು ಜಿಲ್ಲೆಗೆ ಎಸ್‌ಪಿಯಾಗಿ ನೇಮಿಸಲಾಗಿತ್ತು. ಆದರೆ ಒಂದೇ ದಿನದಲ್ಲಿ ಈ ನೇಮಕದ ಆದೇಶವನ್ನು ಹಿಂದೆ ಪಡೆದಿದ್ದ ಸರ್ಕಾರ ಎನ್. ವಿಷ್ಣುವರ್ಧರನ್ನು ನೇಮಿಸಿತ್ತು. ಈಗ ಮತ್ತೆ ಅಕ್ಷಯ್ ಮಚೀಂದ್ರ ಅವರನ್ನು ಉಡುಪಿಯ ಜಿಲ್ಲಾ ರಕ್ಷಣಾಧಿಕಾರಿಯಾಗಿ ನೇಮಿಸಲಾಗಿದೆ.
ಇದನ್ನೂ ಓದಿ| ಶಿವಮೊಗ್ಗ, ತುಮಕೂರು ಬಳಿಕ ಉಡುಪಿ: ಹಿಂದು ರಾಷ್ಟ್ರ ಎಂಬ ತಲೆಬರಹ ಇರುವ ಬ್ಯಾನರ್ ತೆರವಿಗೆ ಪಿಎಫ್‌ಐ ಆಗ್ರಹ