ಉಡುಪಿ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿಯಲ್ಲಿ ಶಾಲೆಯಿಂದ ಮನೆಗೆ ಬರುವಾಗ ಕಾಲುಸಂಕದಿಂದ ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದ ಬಾಲಕಿ ಸನ್ನಿಧಿ(7) ಅಂತ್ಯ ಸಂಸ್ಕಾರ ಬುಧವಾರ ನೆರವೇರಿತು.
ಸೋಮವಾರ ಸಂಜೆ ಕಾಲು ಸಂಕ(ಸೇತುವೆ) ದಾಟುವ ವೇಳೆ ಕಾಲು ಜಾರಿ ಬಾಲಕಿ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಳು. 48 ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮನೆಯ ಸಮೀಪ ಬಾಲಕಿ ಅಂತ್ಯಕ್ರಿಯೆ ನಡೆಸಲಾಗಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಬಾಲಕಿ ಸನ್ನಿಧಿ ಓದುತ್ತಿದ್ದಳು. ಶಾಲೆಯಿಂದ ಬಾಲಕಿ ವಾಪಸ್ ಆಗುವ ವೇಳೆ ದರ್ಘಟನೆ ನಡೆದಿತ್ತು.
ಇದನ್ನೂ ಓದಿ | Heavy Rain | ಕಾಲು ಸಂಕ ದಾಟುವಾಗ ಜಾರಿ ಬಿದ್ದು ಶಾಲಾ ಬಾಲಕಿ ನೀರು ಪಾಲು