Site icon Vistara News

ದೇವಸ್ಥಾನದಲ್ಲಿ ದೈವಗಳ ಸ್ವತ್ತು ಕದಿಯುತ್ತಿದ್ದವನ ಬಂಧನ

ಭಾಸ್ಕರ್ ಶೆಟ್ಟಿ

ಉಡುಪಿ: ಬಾಳಕಟ್ಟು ಬೀಡುಮನೆ ದೇವಸ್ಥಾನಕ್ಕೆ ನುಗ್ಗಿ ದೇವರ ಸ್ವತತುಗಳನ್ನು ಕದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಹಿರೇಬೆಟ್ಟು ನಿವಾಸಿ ಭಾಸ್ಕರ್ ಶೆಟ್ಟಿ (49) ಬಂಧಿತ ಆರೋಪಿ.

ಬಾಳಕಟ್ಟು ಬೀಡುಮನೆ ದೇವಸ್ಥಾನಕ್ಕೆ ನುಗ್ಗಿದ ಆರೋಪಿ ಅಲ್ಲಿದ್ದ ಆರತಿ, ಪಂಚಲೋಹದ ಮುಖ, ಹಿತ್ತಾಳೆ ಸಾಮಗ್ರಿ, ಘಂಟೆ ಸೇರಿದಂತೆ ₹50 ಸಾವಿರ ಮೌಲ್ಯದ ಸುತ್ತುಗಳನ್ನು ಕಳ್ಳತನ ಮಾಡಿದ್ದ.

ಇದನ್ನೂ ಓದಿ| ಶಿಗ್ಗಾಂವಿ ರಾಜಶ್ರೀ ಥಿಯೇಟರ್‌ ಶೂಟೌಟ್ ಪ್ರಕರಣದ ಆರೋಪಿ ಬಂಧನ

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ| ಮಂಪರು ಬರಿಸುವ ಮಾದಕ ತೈಲ ಮಾರುತ್ತಿದ್ದ ಆರೋಪಿ ಬಂಧನ, 200 ಗ್ರಾಂಗೆ 10 ಲಕ್ಷ!

Exit mobile version