Site icon Vistara News

ಮಾ.21ರಂದು ಉಡುಪಿಯ ಜನ್ನಾಡಿ ಕೊರಗರ ಕಾಲೊನಿಯಲ್ಲಿ 15 ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

Bhoomi Puja

ಉಡುಪಿ: ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಮಾರ್ಚ್‌ 21ರಂದು ಉಡುಪಿ ಜಿಲ್ಲೆಯ ಜನ್ನಾಡಿ ಕೊರಗರ ಕಾಲೊನಿಯಲ್ಲಿ ಬಡವರಿಗಾಗಿ 15 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜನ್ನಾಡಿ ಕೊರಗರ ಕಾಲೊನಿಯಲ್ಲಿ ಮಾ.21ರಂದು ಬೆಳಗ್ಗೆ 10ಗಂಟೆಗೆ ಉಡುಪಿಯ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ, ಸಮಾಜ ಸೇವಕರು, ಕಲಾ ಸೇವಕರಾದ ಮುರಳಿ ಕಡೆಕಾರ್ ಅವರು ಪ್ರಾಸ್ತಾಮಿಕ ಭಾಷಣ ಮಾಡಲಿದ್ದಾರೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ. ಎಚ್. ಎಸ್. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ.ಸುಮನಾ ಶೆಟ್ಟಿ ಮತ್ತು ಕಾರ್ಯ ನಿರ್ವಾಹಕ ಸಮಿತಿ ಸದಸ್ಯರು ಉಪಸ್ಥಿತಲಿದ್ದಾರೆ.

ಇದನ್ನೂ ಓದಿ | Kaivara Tatayya Jayanthi: ಕೈವಾರದಲ್ಲಿ ಮಾ.24ರಿಂದ 26ರವರೆಗೆ ಸದ್ಗುರು ತಾತಯ್ಯ ಜಯಂತಿ, ರಥೋತ್ಸವ

“ರಾಮ ಮಂದಿರವಾಗಿದೆ. ರಾಮ ರಾಜ್ಯವಾಗಬೇಕಾಗಿದೆ. ಪ್ರಜೆಗಳು ನೆಮ್ಮದಿಯಿಂದ ಬಾಳ್ವೆಯನ್ನು ನಡೆಸಬೇಕಾದರೆ ಭಾರತದಂತಹ ಜನ ನಿಬಿಡ ದೇಶದಲ್ಲಿ ಬಡತನ ನಿರ್ಮೂಲನವಾಗಬೇಕಾಗಿದೆ. ಉಳ್ಳವರು ಸಮಾಜದಲ್ಲಿ ನೊಂದವರಿಗೆ ಮನೆ ನಿರ್ಮಿಸಿ, ವಿದ್ಯಾಭ್ಯಾಸಕ್ಕೆ ನೆರವು ನೀಡಿ ಆರ್ಥರ ನೋವಿಗೆ ಸ್ಪಂದಿಸಿದಲ್ಲಿ ರಾಮರಾಜ್ಯ ಅಕ್ಷರರ್ಶ ನಿಜವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ಹೀಗಾಗಿ ಶ್ರೀಗಳ ʼರಾಮರಾಜ್ಯ’ದ ಕನಸನ್ನು ನನಸಾಗಿಸುವ ಹಾದಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಹೆಜ್ಜೆ ಇಟ್ಟಿದೆ.

Exit mobile version