ಉಡುಪಿ: ಉಡುಪಿ ನಗರ ಸಭೆ ಸದಸ್ಯೆ ಸೆಲೀನ್ ಕರ್ಕಡಾ ಅವರು ನಿಧನರಾಗಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೆಲೀನ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಅಸೌಖ್ಯದ ಹಿನ್ನಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಶನಿವಾರ ರಾತ್ರಿ ಸುಮಾರು 11:30ದಕ್ಕೆ ಅವರು ಅಸುನೀಗಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದರು.
ಉಡುಪಿ ನಗರ ಸಭೆಯ ಪೆರಂಪಳ್ಳಿ ವಾರ್ಡ್ ನ ಸದಸ್ಯರಾಗಿದ್ದವರು. ನಗರ ಸಭಾ ಸದಸ್ಯ ರಮೇಶ್ ಕಾಂಚನ್ ಸೇರಿದಂತೆ ಹಲವರು ಸೆಲೀನ್ ಕರ್ಕಡಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.