Site icon Vistara News

ಮಲ್ಪೆ: ಕೀಟ ಓಡಿಸಲು ಹಾಕಿದ ಹೊಗೆ ಬೆಂಕಿಯಾಗಿ ಮನೆ ಭಸ್ಮ

ಮನೆಗೆ ಬೆಂಕಿ

ಉಡುಪಿ : ಕೀಟಗಳನ್ನು ಓಡಿಸಲೆಂದು ಹಾಕಿದ ಹೊಗೆ, ಬೆಂಕಿಯಾಗಿ ಹೊತ್ತಿಕೊಂಡು ಇಡೀ ಮನೆಯನ್ನೇ ಆಹುತಿ ತೆಗೆದುಕೊಂಡ ಘಟನೆ ಇಲ್ಲಿಗೆ ಸಮೀಪದ ಮಲ್ಪೆಯ ಕಲ್ಮಾಡಿಯಲ್ಲಿ ಸಂಭವಿಸಿದೆ.

ಕಲ್ಮಾಡಿಯ ವಿಠಲ್‌ ಕೋಟ್ಯಾನ್ ಅವರ ಮನೆಯಲ್ಲಿ ಕೀಟ ಓಡಿಸಲು ಸಂಜೆ ವೇಳೆ ಹೊಗೆ ಹಾಕಿದ್ದರು. ಇದರಲ್ಲಿದ್ದ ಕೆಂಡ ಹೊತ್ತಿಕೊಂಡು ಬೆಂಕಿಯಾಗಿದೆ. ಈ ಬೆಂಕಿ ಮನೆಯ ಮಹಡಿಗೆ ತಗುಲಿ ಮನೆ ಹೊತ್ತಿ ಉರಿದಿದೆ.

ಇದನ್ನೂ ಓದಿ | ದೆಹಲಿ ಪಾರ್ಕಿಂಗ್‌ ಸ್ಥಳದಲ್ಲಿ ಭೀಕರ ಬೆಂಕಿ; ಸುಟ್ಟು ಕರಕಲಾದ ಎಲೆಕ್ಟ್ರಿಕ್‌ ವಾಹನಗಳು

ಬಳಿಕ ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿಯೇ ಮನೆಯ ಮಹಡಿಯ ಮೇಲೆ ಸೇರಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿವೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | BBMP Election | ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಪ್ರಾರಂಭಿಸಿದ BJP

Exit mobile version