Site icon Vistara News

ನಮ್ಮ ಬಾಕಿ ಸಂಬಳ ಕೊಡಿ ಪ್ಲೀಸ್‌, ಸರಕಾರದ ತೆಕ್ಕೆ ಸೇರಿದ ಬಿ.ಆರ್‌ ಶೆಟ್ಟಿ ಆಸ್ಪತ್ರೆ ಸಿಬ್ಬಂದಿ ಮೊರೆ

ಬಿ.ಆರ್.ಶೆಟ್ಟಿ

ಉಡುಪಿ: ಉದ್ಯಮಿ ಬಿ.ಆರ್‌. ಶೆಟ್ಟಿ ಅವರ ನಿರ್ವಹಣೆಯಲ್ಲಿದ್ದ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮರಳಿ ವಶಕ್ಕೆ ಪಡೆದುಕೊಂಡ ಸರಕಾರಕ್ಕೀಗ ಹೊಸ ಸಮಸ್ಯೆ ಎದುರಾಗಿದೆ.

ಬಿ.ಆರ್‌. ಶೆಟ್ಟಿ ನಿರ್ವಹಣೆಯಲ್ಲಿದ್ದಾಗ ಅಲ್ಲಿನ ಸಿಬ್ಬಂದಿಗೆ ಐದು ತಿಂಗಳ ಕಾಲ ವೇತನ ಆಗಿರಲಿಲ್ಲ. ಈಗ ಜೂನ್‌ 1ರಿಂದ ಸರಕಾರ ಅದನ್ನು ತನ್ನ ವಶಕ್ಕೆ ಪಡೆದ ಬೆನ್ನಿಗೇ ಅದರ ಸಿಬ್ಬಂದಿ ತಮಗೆ ಹಳೆ ಬಾಕಿ ವೇತನವನ್ನೂ ಕೊಡಿ ಎಂದು ಮನವಿ ಮಾಡಿದ್ದಾರೆ. ಮಂಗಳವಾರ ಸಿಬ್ಬಂದಿ ಸೇರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ಉದ್ಯಮಿ ಬಿ.ಆರ್.ಶೆಟ್ಟಿ ಅವರು ಸದೃಢವಾಗಿದ್ದ ಕಾಲದಲ್ಲಿ ಭಾರಿ ನಿರೀಕ್ಷೆಯೊಂದಿಗೆ ಹೆರಿಗೆ ಆಸ್ಪತ್ರೆಯ ನಿರ್ವಹಣೆಯನ್ನು ವಹಿಸಿಕೊಂಡಿದ್ದರು. ಆದರೆ, ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ ಬಳಿಕ ಅದನ್ನು ಸರಕಾರಕ್ಕೆ ಹಸ್ತಾಂತರ ಮಾಡಿದ್ದರು.. ಹೀಗಾಗಿ ಜೂನ್‌ 1ರಿಂದ ಸರ್ಕಾರವೇ ಆಸ್ಪತ್ರೆಯ ನಿರ್ವಹಣೆ ಆರಂಭಿಸಿದೆ.

ಈ ಹಿಂದೆ ಬಿ.ಆರ್‌. ವೆಂಚರ್ಸ್‌ ಅಡಿ ಕೆಲಸ ಮಾಡುತ್ತಿದ್ದ ವೇಳೆ ಹಲವು ಸಿಬ್ಬಂದಿಗಳಿಗೆ ಸಂಬಳ ಬಾಕಿ ಉಳಿದಿದೆ. ಹೀಗಾಗಿ ಸುಮಾರು 5 ತಿಂಗಳ ಸಂಬಳ ಬಾಕಿ ಇರಿಸಿಕೊಂಡಿರುವ ಬಿಆರ್ ವೆಂಚರ್ಸ್ ಕೂಡಲೇ ಸಂಬಳ ಪಾವತಿ ಮಾಡಬೇಕು ಎಂದು ಸಿಬ್ಬಂದಿ ಆಗ್ರಹಿಸಿದರು.

ಆಸ್ಪತ್ರೆಯ ಪೀಠೋಪಕರಣ ಸಾಗಾಟಕ್ಕೆ ಬಿ.ಆರ್.ವೆಂಚರ್ಸ್ ಮುಂದಾಗಿದ್ದರಿಂದ ಆಕ್ರೋಶಗೊಂಡ ಸಿಬ್ಬಂದಿ, ಅವರನ್ನು ತಡೆದು ಸಂಬಳ ಪಾವತಿ ಮಾಡುವವರೆಗೆ ಪೀಠೋಪಕರಣ ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ʼಇದನ್ನೂ ಓದಿ | ಮಳೆಯ ನಡುವೆಯೇ ಅಮಾನವೀಯವಾಗಿ ರೋಗಿಯನ್ನು ಶಿಫ್ಟ್ ಮಾಡಿದ ಸಿಬ್ಬಂದಿ

Exit mobile version