Site icon Vistara News

ವಿವಾದ ಸೃಷ್ಟಿಸಿದ ಜೈ ಹಿಂದೂ ರಾಷ್ಟ್ರ ಬ್ಯಾನರ್; ಉಡುಪಿಯಲ್ಲಿ ಬಿಗಿ‌ ಪೊಲೀಸ್ ಬಂದೋಬಸ್ತ್‌

ಬ್ಯಾನರ್

ಉಡುಪಿ: ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬ್ಯಾನರ್‌ ವಿವಾದಕ್ಕೆ ಕಾರಣವಾಗಿದ್ದು, ಶಿವಮೊಗ್ಗದಲ್ಲಿ ಕೋಮು ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿಯೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಹಾಗೂ ವಿ.ಡಿ.ಸಾವರ್ಕರ್ ಅವರ ಭಾವಚಿತ್ರಗಳಿರುವ ಈ ಬ್ಯಾನರ್‌ ನಲ್ಲಿ “ಜೈ ಹಿಂದೂ ರಾಷ್ಟ್ರʼʼ ಎಂದು ಬರೆಯಲಾಗಿದೆ. ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಪಿಎಫ್‌ಐ ಸಂಘಟನೆ ಒತ್ತಾಯಿಸಿದೆ. ಹೀಗಾಗಿ ಬ್ರಹ್ಮಗಿರಿ ಸರ್ಕಲ್ ಬಳಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಸ್ವಾತಂತ್ರೋತ್ಸವಕ್ಕೆ ಶುಭ ಕೋರುವ ಬ್ಯಾನರ್‌ನಲ್ಲಿ ವೀರ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್, ಕ್ರಾಂತಿಕಾರಿ ಹೋರಾಟದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ವೀರರು ಎನ್ನುವ ಬರಹವಿದ್ದು, ಪ್ರಮೋದ್ ಉಚ್ಚಿಲ, ಯೋಗೀಶ್ ಕುತ್ಪಾಡಿ ಮತ್ತು ಶೈಲೇಶ್ ಶುಭಕೋರುವವರು ಎಂದು ಪ್ರಕಟಿಸಲಾಗಿದೆ. ಇದಕ್ಕೆ ಆಕ್ಷೇಪಣೆ ಕೇಳಿ ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

ಇದನ್ನೂ ಓದಿ | Shivamogga Clash | ಶಿವಮೊಗ್ಗ ಉದ್ವಿಗ್ನ; ಹಲವೆಡೆ ಹೈ ಅಲರ್ಟ್‌

Exit mobile version