ಉಡುಪಿ: ಯಾವುದೇ ಧಾರ್ಮಿಕ ಕೇಂದ್ರಗಳ ಪುನರುಜ್ಜೀವನ ಕುರಿತಂತೆ ನ್ಯಾಯಾಲಯ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ದೇವಸ್ಥಾನ ನೆಲಸಮ ಮಾಡಿ ಮಸೀದಿ ಕಟ್ಟಲಾಗಿದೆ ಎಂಬ ಇತ್ತೀಚಿನ ಅನೇಕ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ, ಯಾವುದೇ ದೇವಸ್ಥಾನ ಜಾಗ ಅಕ್ರಮವಾಗಿ ವಶಪಡಿಸಿಕೊಂಡು ಅಲ್ಲಿ ಬೇರೆ ಕಟ್ಟಡ ನಿರ್ಮಿಸಿದ್ದರೆ ಪರಿವರ್ತನೆ ಆಗಬೇಕು ಎಂದು ತಿಳಿಸಿದ್ದಾರೆ
ದೇವಾಲಯವು ಯಾವುದೊ ಕಾರಣಕ್ಕೆ ಅವು ಯಾವದೇ ಕಾಲದಲ್ಲಿ ಮಸೀದಿಗಳಾಗಿ ಪರಿವರ್ತಿತವಾಗಿರುತ್ತಾವೆ. ಯಾವುದೋ ದೇವಾಲಯವನ್ನು ಖರೀದಿ ಮಾಡಿ ಆ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಿದ್ದರೆ ನಮ್ಮ ಆಕ್ಷೇಪ ಇಲ್ಲ. ಅದರ ಬದಲಾಗಿ ದೇವಸ್ಥಾನವನ್ನು ಆಕ್ರಮಿಸಿಕೊಂಡು ಆ ಜಾಗದಲ್ಲಿ ಮಸೀದಿ ನಿರ್ಮಿಸಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ ಎಂದು ಹೇಳಿದರು.
ಇದನ್ನೂ ಓದಿ | ʼಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಗೌರವಿಸುತ್ತೇವೆʼ: ಮಾಜಿ ಸಿಎಂ ಸಿದ್ದರಾಮಯ್ಯ
ಮಸೀದಿಗಳನ್ನು ಧ್ವನಿವರ್ಧಕ ಬಳಕೆ ಕುರಿತು ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ. ವಿಶೇಷ ದಿನಗಳು ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ.
ಸಮಾಜದಲ್ಲಿ ನೆಮ್ಮದಿಯಿಂದ ಬಾಳಿ ಬದುಕಬೇಕು ಎಂದು ಇದ್ದರೆ, ಒಂದು ನೀತಿ ನಿಯಮ ಕಟ್ಟು ಕಟ್ಟುಪಾಡುಗಳಿಗೆ ಎಲ್ಲರೂ ಬದ್ಧರಾಗಿರಬೇಕು. ನಮಗೆ ಸರ್ಕಾರ ಇದೆ, ಸಂವಿಧಾನ ಇದೆ, ಸುಪ್ರೀಂಕೋರ್ಟ್ ಇದೆ. ನಾವು ಹೇಗೆ ಇರಬೇಕು ಎಂಬುದಾಗಿ ಈ ವ್ಯವಸ್ಥೆ ಹೇಗೆ ನಿರ್ದೇಶ ನೀಡುತ್ತದೆಯೋ ಅದಕ್ಕೆ ನಾವು ಬದ್ಧರಾಗಿ ಬಾಳಬೇಕು. ಆಗ ಯಾವುದೇ ಗೊಂದಲವೂ ಇರುವುದಿಲ್ಲ.
ಹಿಂದೂಗಳ ಪೂಜಾ ಮಂದಿರವಾದರೆ ಹಿಂದುಗಳಿಗೆ ಬಿಟ್ಟುಕೊಡಿ ಅಥವಾ ಮುಸಲ್ಮಾನರ ದರ್ಗಾ ಆಗಿದ್ದರೆ ಮುಸಲ್ಮಾನರಿಗೆ ಬಿಟ್ಟುಕೊಡಿ. ಸಮಾಜದಲ್ಲಿ ಇನ್ನು ಮುಂದೆ ಶಾಂತಿ ನೆಮ್ಮದಿ ನೆಲಸುವಂತೆ ಎಲ್ಲ ವರ್ಗದವರೂ, ನ್ಯಾಯಾಲಯದ ತೀರ್ಪನ್ನೂ ಪರಿಪಾಸಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಡುತ್ತೇನೆ ಎಂದರು.
ಇದನ್ನೂ ಓದಿ| ಜ್ಞಾನವಾಪಿ ಮಸೀದಿ ಸರ್ವೆ ಪೂರ್ಣ, ಬಾವಿಯಲ್ಲಿ ಶಿವಲಿಂಗ ಸಿಕ್ಕಿದೆ ಎಂದ ವಕೀಲ