ಉಡುಪಿ : ಹೆಬ್ರಿ ತಾಲೂಕಿನ ಮೇಲ್‌ಪೇಟೆಯ ಮನೆಯೊಂದರಲ್ಲಿ ಕೊಟ್ಟಿಗೆಯಲ್ಲಿದ್ದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು (King Cobra) ರಕ್ಷಣೆ ಮಾಡಲಾಗಿದೆ. ಕಾಳಿಂಗ ಸರ್ಪ ನೋಡಿ ಒಂದು ಕ್ಷಣ ಸ್ಥಳೀಯರು ಭಯಭೀತರಾಗಿದ್ದಾರೆ. ನಂತರ ಮನೆಯವರು ಸ್ಥಳೀಯ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದರು. ಕೊಟ್ಟಿಗೆಯಲ್ಲಿ ಸರ್ಪ ಬೆಳ್ಳಂಬೆಳಗ್ಗೆ ಮನೆಯವರಿಗೆ ಕಾಣಿಸಿಕೊಂಡಿದೆ. ನಂತರ ಉರಗ ತಜ್ಞ ನಾಗರಾಜ ನಾಯ್ಕ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ನಾಗರಾಜ ನಾಯ್ಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಹಿಡಿದ ಕಾಳಿಂಗ ಸರ್ಪವನ್ನು ಸೋಮೇಶ್ವರ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ | Video viral | ಸರಕಾರಿ ಬಸ್‌ನಲ್ಲಿ ಡ್ರೈವರ್ ಕಾಲಡಿಯೇ ಹೆಡೆ ಎತ್ತಿ ಬುಸುಗುಟ್ಟಿದ ಕಾಳಿಂಗ ಸರ್ಪ! ಮುಂದೇನಾಯ್ತು?