Site icon Vistara News

Rishab Shetty | ಉಡುಪಿಯ ಆನೆಗುಡ್ಡೆಗೆ ಭೇಟಿ ನೀಡಿದ ರಿಷಬ್‌ ಶೆಟ್ಟಿ: ಶ್ರೀ ವಿನಾಯಕನಿಗೆ ವಿಶೇಷ ಪೂಜೆ

Rishab Shetty

ಉಡುಪಿ: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಅವರು ಕುಂದಾಪುರ ಸಮೀಪದ ಆನೆಗುಡ್ಡೆಗೆ ಡಿಸೆಂಬರ್‌ 5 ಸೋಮವಾರ ಭೇಟಿ ಕೊಟ್ಟಿದ್ದಾರೆ. ಸಕುಟುಂಬ ಸಮೇತರಾಗಿ ಇಲ್ಲಿನ ಶ್ರೀ ವಿನಾಯಕನ ದರ್ಶನ ಪಡೆದಿದ್ದಾರೆ. ಕಾಂತಾರ ಸಿನಿಮಾ ಸೆಟ್ಟೇರುವ ಮೊದಲು ಆನೆಗುಡ್ಡೆಗೆ ಬಂದು ಪೂಜೆ ಮಾಡಿಸಿದ್ದರು ರಿಷಬ್‌ ಶೆಟ್ಟಿ. ಇದೀಗ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಹಿಟ್‌ ಕಂಡ ಹಿನ್ನೆಲೆಯಲ್ಲಿ ಶ್ರೀ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಂತಾರ ಸಿನಿಮಾದ ಶೂಟಿಂಗ್ ನಡೆದಿರುವುದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹುಟ್ಟೂರು ಕೆರಾಡಿಯಲ್ಲಿ ಎಂಬುದು ವಿಶೇಷ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಎಂಬಲ್ಲಿ ಸೆಟ್‌ ಹಾಕಿ, ಕಾಂತಾರ ಶೂಟಿಂಗ್ ಮಾಡಲಾಗಿತ್ತು. 

ಇದನ್ನೂ ಓದಿ | Rishab Shetty | ಹ್ಯಾಷ್‌ ಟ್ಯಾಗ್‌ ಮ್ಯಾಗಜಿನ್‌ ಮುಖಪುಟದಲ್ಲಿ ರಿಷಬ್ ಶೆಟ್ಟಿ: ವೈರಲ್‌ ಆಯ್ತು ವಿಡಿಯೊ!

Exit mobile version