Site icon Vistara News

Tragedy video: ಜಲಪಾತ ನೋಡುತ್ತಿದ್ದ ವಿದ್ಯಾರ್ಥಿ ಕಾಲು ಜಾರಿ ಕಣ್ಮರೆ, ಮೊಬೈಲ್‌ನಲ್ಲಿ ದಾಖಲಾಯ್ತು ದುರ್ಘಟನೆ

falls tragedy

ಉಡುಪಿ: ಅರಶಿನಗುಂಡಿ ಜಲಪಾತ (Arashinagundi falls) ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಕಾಲು ಜಾರಿ ಬಿದ್ದು ಉಕ್ಕಿ ಹರಿಯುತ್ತಿದ್ದ ಜಲಪಾತದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮತ್ತೊಬ್ಬ ಯುವಕನ ಮೊಬೈಲ್‌ನಲ್ಲಿ (Tragedy video) ಸೆರೆಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಈ ದುರ್ಘಟನೆ ನಡೆದಿದೆ.

ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪಿಎಸ್ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಪ್ರಕರಣ ಕೊಲ್ಲೂರು ಠಾಣೆಯಲ್ಲಿ ದಾಖಲಾಗಿದೆ.

ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಎಲ್ಲ ಕಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಹಾಗೂ ಜಲಪಾತಗಳು ತುಂಬಿ ಹರಿಯುತ್ತಿವೆ. ಜಲಪಾತಗಳ ಬಳಿಗೆ ತೆರಳಬೇಕಿದ್ದರೆ ಎಚ್ಚರಿಕೆಯಿಂದಿರಿ. ಸೆಲ್ಫಿ ತೆಗೆದುಕೊಳ್ಳುವುದು, ಜಲಪಾತದ ತೀರ ಸಮೀಪಕ್ಕೆ ಹೋಗುವುದು, ನೀರು ಬಿದ್ದು ಜಾರುತ್ತಿರುವ ಕಡೆಗಳಲ್ಲಿ ಕಾಲಿಡುವುದು ಮುಂತಾದ ಹುಚ್ಚಾಟಗಳು ಬೇಡ ಎಂದು ಪೊಲೀಸ್‌ ಇಲಾಖೆ ಹಾಗೂ ಅರಖ್ಯ ಇಲಾಖೆ ಎಚ್ಚರಿಸುತ್ತಿದೆ. ಆದರೂ ಮೈಮರೆವಿನಿಂದ ಇಂಥ ಅನಾಹುತಗಳು ಸಂಭವಿಸುತ್ತಿವೆ.

ಇದನ್ನೂ ಓದಿ: Viral Video: ಫೋನ್‌ನಲ್ಲೇ ಮುಳುಗಿರಬೇಡ ಎಂದು ಪೋಷಕರು ಬೈದಿದ್ದಕ್ಕೆ ಜಲಪಾತಕ್ಕೆ ಜಿಗಿದ ಯುವತಿ

Exit mobile version