Site icon Vistara News

Vistara News Launch | ಮಾಧ್ಯಮಗಳಿಂದ ಸಮಾಜ ತಿದ್ದುವ ಕೆಲಸವಾಗಲಿ: ಬನ್ನಾಡಿ ಸೋಮನಾಥ ಹೆಗ್ಡೆ

Vistara News Launch

ಉಡುಪಿ: ಜಿಲ್ಲೆಯ ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಮಂಗಳವಾರ ನೆರವೇರಿತು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಧ್ಯಮಗಳಿಂದ ಸಮಾಜವನ್ನು ತಿದ್ದುವ ಕೆಲಸವಾಗಬೇಕಿದೆ. ಮಾಧ್ಯಮಗಳನ್ನು ನಾವು ಬಹಳ ಹತ್ತಿರದಿಂದ ನೋಡುತ್ತಿದ್ದೇವೆ. ಇಂದು ಹಲವು ರೂಪಗಳ ಮೂಲಕ ಮಾಧ್ಯಮಗಳು ನಮಗೆ ಲಭ್ಯವಾಗುತ್ತಿವೆ. ದೇಶವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮೂಲಕ ನಡೆಯುತ್ತಿದೆ. ಮಾಧ್ಯಮರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿದ್ದು, ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.

ಮುಖ್ಯ ಅತಿಥಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಮಾತನಾಡಿ, ವಿಸ್ತಾರ ಕನ್ನಡ ಸಂಭ್ರಮಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಬಹಳ ಒಳ್ಳೆಯ ಸ್ಥಳವಾಗಿದೆ. ಏಕೆಂದರೆ ಇದು ಕವಿ ಮುದ್ದಣ ಪಾಠ ಮಾಡಿದ ಸ್ಥಳವಾಗಿದೆ. ಡಾ.ಕೋಟ ಶಿವರಾಮ ಕಾರಂತರು ಇಲ್ಲಿಯೇ ಅಭ್ಯಾಸ ಮಾಡಿದ್ದರು. ಅಲ್ಲದೆ, ಅವರು ತಮ್ಮ‌ ವಸಂತ ಪತ್ರಿಕೆಯನ್ನು ಪ್ರಾರಂಭಿಸಿದ್ದೂ ಸಹ ಇಲ್ಲಿಯೇ. ಹಾಗಾಗಿ ವಿಸ್ತಾರ ನ್ಯೂಸ್ ವಿಸ್ತಾರವಾಗಿ ಜಗದಗಲ ಪಸರಿಸಲಿ ಎಂದು ಶುಭ ಹಾರೈಸಿದರು.

ಕುಂದಾಪುರ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ.ಜೆ ಅಧ್ಯಕ್ಷತೆ ವಹಿಸಿದ್ದರು. ವಿಸ್ತಾರ ನ್ಯೂಸ್ ಉಡುಪಿ ಜಿಲ್ಲಾ ವರದಿಗಾರ ಅಶ್ವತ್ಥ್ ಆಚಾರ್ಯ ವಂದಿಸಿದರು.

ಇದನ್ನೂ ಓದಿ | Vistara News Launch | ಕುಮಟಾದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಅದ್ಧೂರಿ; ವಿಸ್ತಾರ ನ್ಯೂಸ್‌ಗೆ ಶುಭ ಕೋರಿದ ಗಣ್ಯರು

Exit mobile version