ಆನೇಕಲ್: ಯುಜಿಕೆ ವಿದ್ಯಾರ್ಥಿಯನ್ನು ಫೇಲ್ (UKG student fail) ಮಾಡಿರುವ ವಿಚಾರ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆ ಆನೇಕಲ್‌ನ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಇಲಾಖೆಯ ನಿಯಮದ ಪ್ರಕಾರ 9ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದು. ಆದರೆ ಯುಕೆಜಿಯಲ್ಲಿ ಓದುತ್ತಿರುವ ಮಗುವನ್ನು ಫೇಲ್ ಮಾಡಲಾಗಿದೆ ಎಂಬ ಸುದ್ದಿ ಪ್ರಸಾರವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ಇದು ಇಲಾಖೆಗೂ ಮುಜುಗರವನ್ನು ಉಂಟು ಮಾಡಿದೆ.
ಹೀಗಾಗಿ ಈ ಬಗ್ಗೆ ಲಿಖಿತ ರೂಪದಲ್ಲಿ ವಿವರಣೆಯನ್ನು ಈ ದಿನವೇ (ಫೆ.9) ಸಲ್ಲಿಸಲು ಬಿಇಓ ಜಯಲಕ್ಷ್ಮೀ ನೋಟಿಸ್ ಮೂಲಕ ತಿಳಿಸಿದ್ದಾರೆ. ಒಂದು ವೇಳೆ ತಪ್ಪಿದಲ್ಲಿ ಶಾಲೆಗೆ ನೀಡಲಾಗಿರುವ ಅನುಮತಿಯನ್ನು ರದ್ದು ಪಡಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಏನಿದು ಘಟನೆ?
ಇಲ್ಲಿನ ಹುಸ್ಕೂರು ಗೇಟ್ ಸಮೀಪದಲ್ಲಿರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯಲ್ಲಿ ಯುಕೆಜಿ ಓದುತ್ತಿರುವ ನಂದಿನಿ ಎಂಬ ವಿದ್ಯಾರ್ಥಿನಿಯನ್ನು ಯುನಿಟ್ ಟೆಸ್ಟ್‌ನಲ್ಲಿ ಫೇಲ್ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡ ನಂದಿನಿ ಪೋಷಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ್ದರು. ಯುಕೆಜಿ ಓದುತ್ತಿರುವ ಮಗುವನ್ನು ಫೇಲ್ ಮಾಡಿದ್ದಕ್ಕೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: Heart attack : ಗಡಿ ಗುರುತಿಗೆ ಬಂದ ಅರಣ್ಯ ಅಧಿಕಾರಿಗಳು, ಜಮೀನು ಕಳೆದುಕೊಳ್ಳುವ ಭಯದಲ್ಲಿ ಹೃದಯಾಘಾತದಿಂದ ರೈತ ಸಾವು