ಆನೇಕಲ್: ಯುಕೆಜಿ ವಿದ್ಯಾರ್ಥಿನಿ ನಂದಿನಿಯನ್ನು (UKG student fail) ಫೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಗೆ ಶಿಕ್ಷಣ ಇಲಾಖೆ ಕಾರಣ ಕೇಳಿ ನೋಟಿಸ್ ನೀಡಿತ್ತು. ಇದೀಗ ಘಟನೆ ಸಂಬಂಧ ಅಕಾಡೆಮಿ ಸ್ಪಷ್ಟೀಕರಣ ಎಂದು ನೀಡಿದ್ದು, ಟೀಚ್ ಮೆಟ್ ಆ್ಯಪ್ ಎಡವಟ್ಟಿನಿಂದ ಹೀಗಾಗಿರುವುದಾಗಿ ತಿಳಿಸಿದೆ.
ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರಗತಿ ಪತ್ರದಲ್ಲಿ ಯಾವುದೇ ಅನುತ್ತೀರ್ಣ ಎಂದು ಮುದ್ರಿಸಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹಿಮ್ಮಾಹಿತಿಯನ್ನು ನೀಡುವ ಟೀಚ್ ಮೆಟ್ ಆ್ಯಪ್ ಎಂಬ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡುವಾಗ ಫೇಲ್ ಎಂದು ಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಡಳಿತಾತ್ಮಕ ದೃಷ್ಟಿಯಿಂದ ಈ ಆ್ಯಪ್‌ನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಶೇ.35 ಅಂಕಗಳಿಗಿಂತ ಕಡಿಮೆ ಬಂದರೆ ಅದು ಫೇಲ್ ಎಂದು ತೋರಿಸುತ್ತಿದ್ದು, ಇದು ಟೀಚ್ ಮೆಟ್ ಆ್ಯಪ್‌ನ Defalut ಆಗಿದೆ. ಇದರಿಂದಾಗಿ ಪೋಷಕರು ತಪ್ಪಾಗಿ ಅರ್ಥೈಸಿಕೊಂಡಿದ್ದು, ನಾವು ಯಾವ ವಿದ್ಯಾರ್ಥಿನಿಯನ್ನು ಫೇಲ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಸಾಫ್ಟವೇರ್ ಕಂಪೆನಿಗೆ ದೋಷ ಸರಿಪಡಿಸಲು ಸೂಚಿಸಲಾಗಿದೆ ಎಂದು ಪತ್ರದಲ್ಲಿ ಉತ್ತರಿಸಿದ್ದಾರೆ.
ಟೀಚ್ ಮೆಟ್ ಆ್ಯಪ್ ನಿಷೇಧಕ್ಕೆ ಸೂಚನೆ
ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಅಳವಡಿಸಿಕೊಂಡಿರುವ ಟೀಚ್ ಮೆಟ್ ಆ್ಯಪ್ ನಿಷೇಧಿಸುವಂತೆ ಶಿಕ್ಷಣ ಸಂಯೋಜಕ ದತ್ತಗುರು ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರ ಹಿತದೃಷ್ಟಿಯಿಂದ ನಿಷೇಧಿಸುವುದು ಒಳಿತು, ಆ್ಯಪ್ ದೋಷದಿಂದ ಮಕ್ಕಳು ಮತ್ತು ಪೋಷಕರಲ್ಲಿ ಅನವಶ್ಯಕ ಗೊಂದಲ ಉಂಟಾಗುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ: UKG student fail: ಯುಕೆಜಿ ವಿದ್ಯಾರ್ಥಿನಿ ಫೇಲ್; ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಶಿಕ್ಷಣ ಇಲಾಖೆ