Site icon Vistara News

Unemployment in Karnataka: ನಿರುದ್ಯೋಗ ‘ಗ್ಯಾರಂಟಿ’; ರಾಜ್ಯದಲ್ಲಿ 2,55 ಲಕ್ಷ ಸರ್ಕಾರಿ ಹುದ್ದೆ ಖಾಲಿ! ಯುವ ಜನರ ಆಕ್ರೋಶ

Unemployment in Karnataka

ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಕಾಶ ಸಿಗದ ಹಿನ್ನೆಲೆಯಲ್ಲಿ ಯುವ ಜನ ಬೇಸತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಬರೋಬ್ಬರಿ 2,55,920 ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ವಿಸ್ತಾರ ನ್ಯೂಸ್ ʼನಿರುದ್ಯೋಗ ಗ್ಯಾರಂಟಿʼ (Unemployment in Karnataka) ಎಂಬ ವಿಶೇಷ ಅಭಿಯಾನ ಆರಂಭಿಸಿದ್ದು, ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಯಾವುದೇ ಸರ್ಕಾರ ಬಂದರೂ ನಿರುದ್ಯೋಗ ಸಮಸ್ಯೆ ಪರಿಹರಿಸುವುದೇ ದೊಡ್ಡ ಸವಾಲು ಆಗಿರುತ್ತದೆ. ಆದರೆ, ಚುನಾವಣೆಯಲ್ಲಿ ಜನರ ಮತ ಸೆಳೆಯಲು ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಯುವಜನತೆಗೆ ಯಾಕೆ ಉದ್ಯೋಗ ಗ್ಯಾರಂಟಿ ನೀಡುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಹೊಸ ಉದ್ಯೋಗ ಸೃಷ್ಟಿಸದಿದ್ದರೂ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನಾದರೂ ಭರ್ತಿ ಮಾಡಬೇಕಲ್ಲವೇ ಎಂಬುವುದು ರಾಜ್ಯದ ಯುವ ಜನತೆಯ ಪ್ರಶ್ನೆಯಾಗಿದೆ.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?

ಸಣ್ಣ ಕೈಗಾರಿಗಳು

ಮಂಜೂರಾದ ಹುದ್ದೆಗಳು: 563
ಕಾರ್ಯನಿರತ ಸಿಬ್ಬಂದಿ: 201
ಖಾಲಿ ಹುದ್ದೆಗಳು: 362
ಶೇ. ಖಾಲಿ ಹುದ್ದೆ: 64%

ನಗರಾಭಿವೃದ್ಧಿ ಇಲಾಖೆ

ಮಂಜೂರಾದ ಹುದ್ದೆಗಳು: 1447
ಕಾರ್ಯನಿರತ ಸಿಬ್ಬಂದಿ: 559
ಖಾಲಿ ಹುದ್ದೆಗಳು: 888
ಶೇ.ಖಾಲಿ ಹುದ್ದೆ: 61%

ಸಾರಿಗೆ ಇಲಾಖೆ

ಮಂಜೂರಾದ ಹುದ್ದೆಗಳು: 2826
ಕಾರ್ಯನಿರತ ಸಿಬ್ಬಂದಿ: 1159
ಖಾಲಿ ಹುದ್ದೆಗಳು: 1667
ಶೇ.ಖಾಲಿ ಹುದ್ದೆ: 59%

ಗೃಹ ಇಲಾಖೆ

ಮಂಜೂರಾದ ಹುದ್ದೆಗಳು: 1,27,481
ಕಾರ್ಯನಿರತ ಸಿಬ್ಬಂದಿ: 1,05,412
ಖಾಲಿ ಹುದ್ದೆಗಳು: 22,069
ಶೇ.ಖಾಲಿ ಹುದ್ದೆ: 17%

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

ಮಂಜೂರಾದ ಹುದ್ದೆಗಳು: 11099
ಕಾರ್ಯನಿರತ ಸಿಬ್ಬಂದಿ: 5093
ಖಾಲಿ ಹುದ್ದೆಗಳು: 6006
ಶೇ.ಖಾಲಿ ಹುದ್ದೆ: 54%

ರೇಷ್ಮೆ ಇಲಾಖೆ

ಮಂಜೂರಾದ ಹುದ್ದೆಗಳು: 4560
ಕಾರ್ಯನಿರತ ಸಿಬ್ಬಂದಿ: 1552
ಖಾಲಿ ಹುದ್ದೆಗಳು: 3008
ಶೇ.ಖಾಲಿ ಹುದ್ದೆ: 66%

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ

ಮಂಜೂರಾದ ಹುದ್ದೆಗಳು: 602
ಕಾರ್ಯನಿರತ ಸಿಬ್ಬಂದಿ: 242
ಖಾಲಿ ಹುದ್ದೆಗಳು: 360
ಶೇ.ಖಾಲಿ ಹುದ್ದೆ: 60%

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಮಂಜೂರಾದ ಹುದ್ದೆಗಳು: 12269
ಕಾರ್ಯನಿರತ ಸಿಬ್ಬಂದಿ: 7153
ಖಾಲಿ ಹುದ್ದೆಗಳು: 5116
ಶೇ.ಖಾಲಿ ಹುದ್ದೆ: 42%

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

ಮಂಜೂರಾದ ಹುದ್ದೆಗಳು: 28198
ಕಾರ್ಯನಿರತ ಸಿಬ್ಬಂದಿ: 17252
ಖಾಲಿ ಹುದ್ದೆಗಳು: 10,946
ಶೇ.ಖಾಲಿ ಹುದ್ದೆ: 39%

ಇದನ್ನೂ ಓದಿ | Job News: 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ; ಎಲ್ಲಿ ಎಷ್ಟು ಹುದ್ದೆ?

ವಿಸ್ತಾರನ್ಯೂಸ್ ಅಭಿಯಾನಕ್ಕೆ ಧ್ವನಿಗೂಡಿಸಿದ ಉದ್ಯೋಗಾಕಾಂಕ್ಷಿಗಳು

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು ಬೇಸರ ಹೊರಹಾಕಿದ್ದು, ವಿಸ್ತಾರ ನ್ಯೂಸ್ ಅಭಿಯಾನಕ್ಕೆ ಧ್ವನಿಗೂಡಿಸಿದ್ದಾರೆ.

ಹಲವು ವರ್ಷದಿಂದ ಪರಿಕ್ಷೆಗೆ ತಯಾರಿ ನಡೆಸುತ್ತಿದ್ದೇವೆ. ಸರ್ಕಾರ ನೇಮಕಾತಿ ನಡೆಸುತ್ತಿಲ್ಲ. ವಯಸ್ಸು ಮೀರುತ್ತಿದ್ದು, ಅಧ್ಯಯನಕ್ಕೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಕೆಲಸವಿಲ್ಲದೆ ನಾವು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಎಲ್ಲಾ ಕಡೆಯೂ ಬರೀ ಹಗರಣಗಳೇ? ಯಾರಿಗೆ ಬೇಕು ಸರ್ಕಾರದ ಗ್ಯಾರಂಟಿಗಳು. ಮೊದಲು ಉದ್ಯೋಗ ಕೊಡಲಿ ಎಂದು ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.

2023ರ ಏಪ್ರಿಲ್‌ ಇದೂವರೆಗೂ ಕೆಪಿಎಸ್‌ಸಿ 19 ನೇಮಕಾತಿ ಅಧಿಸೂಚನೆ ಹೊರಡಿಸಿದೆ. 2243 ಹುದ್ದೆಗಳಿಗೆ ರಾಜ್ಯದ 10,79,236 ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಎಲ್ಲಾ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದೆ. ಎಲ್ಲವೂ ತಾತ್ಕಾಲಿಕ ಪಟ್ಟಿ ಬಿಡುಗಡೆ, ದಾಖಲೆಗಳ ಪರಿಶೀಲನೆ, ಪೂರ್ವ ಭಾವಿ ಪರೀಕ್ಷಾ ಹಂತದಲ್ಲೇ ಇವೆ ಎಂದು ನೇಮಕಾತಿ ವಿಳಂಬಕ್ಕೆ ಕಿಡಿಕಾರಿದ್ದಾರೆ.

ಬಿ.ವೈ. ವಿಜಯೇಂದ್ರ ಸೇರಿ ಹಲವು ಜನಪ್ರತಿನಿಧಿಗಳ ಮೆಚ್ಚುಗೆ

ವಿಸ್ತಾರ ನ್ಯೂಸ್ ಅಭಿಯಾನದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ನಡೆಗೂ, ನುಡಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದೆಡೆ ಕೇಂದ್ರ ಸರ್ಕಾರವನ್ನು ದೂರುತ್ತಾರೆ, ಹೆಚ್ಚು ಹುದ್ದೆ ಸೃಷ್ಟಿ ಮಾಡಲು ವಿಫಲ ಆಗಿದೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು ಇಡಬೇಕು ಎಂದು ನಾಟಕ ಆಡುತ್ತಾರೆ. ತಮ್ಮದೆ ಸರ್ಕಾರದಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 371 ಜೆ ವಿಧಿಯಡಿ ಮೀಸಲಾತಿ ಜಾರಿಯಾಗಿದೆ. ಅಲ್ಲಿಯೂ 30 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಸರ್ಕಾರ ಪ್ರಾಮಾಣಿಕವಾಗಿ ಆಲೋಚನೆ ಮಾಡಿದ್ದರೇ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಲು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ವಿಸ್ತಾರ ನ್ಯೂಸ್‌ಗೆ ಅಭಿನಂದೆ ಸಲ್ಲಿಸುತ್ತೇನೆ. ಬಹಳ ಪ್ರಮುಖ ವಿಚಾರವನ್ನು ವಿಸ್ತಾರ ನ್ಯೂಸ್ ಕೈಗೆತ್ತಿಗೊಂಡಿದೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ

ವಿಸ್ತಾರ ನ್ಯೂಸ್‌ನ ನಿರುದ್ಯೋಗ ಗ್ಯಾರಂಟಿ ಅಭಿಯಾನಕ್ಕೆ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ನಿರುದ್ಯೋಗ ಸಮಸ್ಯೆ ಅತ್ಯಂತ ಗಂಭೀರವಾದುದು, ಈ ಸರ್ಕಾರ ಗ್ಯಾರಂಟಿ ಕೊಡುವುದರ ಬದಲಿಗೆ ನಿರುದ್ಯೋಗಿಗಳ ಕೈಗೆ ಉದ್ಯೋಗ ಕೊಡುವ ಗ್ಯಾರಂಟಿ ಕೊಡಬೇಕಿತ್ತು. ವಾಜಪೇಯಿ ಯುವಕರ ಕೈಗೆ ಉದ್ಯೋಗ ಕೊಡಿ ಎಂದು ಹೇಳಿದ್ದರು. ನಿರುದ್ಯೋಗ ಹೆಚ್ಚು ಮಾಡುವ ಗ್ಯಾರಂಟಿಗಳು ಯಾರಿಗೆ ಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ರಾಜ್ಯದಲ್ಲಿ 2.56 ಲಕ್ಷ ನಿರುದ್ಯೋಗ ಇಟ್ಟುಕೊಂಡು ಹೇಗೆ ಕೆಲಸ ಮಾಡುತ್ತಿದ್ದಾರೆ. ಕಂದಾಯ, ಶಿಕ್ಷಣ, ಆರೋಗ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾವಿರಾರು ಹುದ್ದೆ ಖಾಲಿ ಇದೆ. ಇದನ್ನು ನಾನು ನಾಳೆ ವಿಧಾನ ಪರಿಷತ್ ಒಳಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Exit mobile version