Site icon Vistara News

Karnataka Police | ರಾಜ್ಯದ 6 ಪೊಲೀಸ್‌ ಅಧಿಕಾರಿಗಳಿಗೆ ಕೇಂದ್ರದ ಗೃಹ ಸಚಿವರ ಶ್ರೇಷ್ಠತಾ ಪ್ರಶಸ್ತಿ

karnataka police

ಬೆಂಗಳೂರು : ಕರ್ನಾಟದಕ ೬ ದಕ್ಷ ಪೊಲೀಸ್ ಅಧಿಕಾರಿಗಳಿಗೆ (Karnataka Police) ಕೇಂದ್ರ ಗೃಹ ಸಚಿವರ ಪ್ರತಿಷ್ಠಿತ ಪದಕ ಲಭಿಸಿದೆ. ೨೦೨೨ನೇ ಸಾಲಿನಲ್ಲಿ ನಡೆಸಿದ ಹಲವಾರು ತನಿಖೆಗಳಿಗಾಗಿ ಅವರಿಗೆ ಈ ಪ್ರಶಸ್ತಿ ದೊರಕಿದೆ.

ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಾದ ಕೆ. ಲಕ್ಷ್ಮೀ ಗಣೇಶ್‌, ಹುಬ್ಬಳ್ಳಿ ಹೆಸ್ಕಾಮ್‌ನ ಪೊಲೀಸ್‌ ಅಧೀಕ್ಷರಾದ ಶಂಕರ್ ಕೆ. ಮರಿಹಾಳ್‌, ರಾಯಚೂರಿನ ಸಿಂಧನೂರು ಉಪ ವಿಭಾಗದ ಡಿವೈಎಸ್‌ಪಿ ವೆಂಕಟಪ್ಪ ನಾಯ್ಕ, ಕರ್ನಾಟಕ ಲೋಕಾಯುಕ್ತದ ಡಿವೈಎಸ್ಪಿ ಎಂ. ಆರ್‌ ಗೌತಮ್‌, ಕಲಬುರಗಿ ಸಿಐಡಿಯ ಡಿವೈಎಸ್ಪಿ ಶಂಕರೇಗೌಡ ಪಾಟೀಲ್‌, ದಾವಣಗೆರೆ ಬಸವನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಚ್‌ ಗುರುಬಸವರಾಜ್‌ ಪದಕ ಪಡೆದಿರುವ ಪೊಲಿಸರ್‌ ಅಧಿಕಾರಿಗಳು.

ಎಲ್ಲ ರಾಜ್ಯಗಳ ಪೊಲೀಸ್‌ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ಗುರುತಿಸಿ ಪ್ರತಿ ವರ್ಷ ಕೇಂದ್ರ ಗೃಹ ಸಚಿವರ ಪ್ರಶಸ್ತಿ ನೀಡಲಾಗುತ್ತದೆ. ಅಂತೆಯೇ ಈ ಬಾರಿ ಕರ್ನಾಟಕದ ಆರು ಅಧಿಕಾರಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಎಸ್ಪಿ ಲಕ್ಷ್ಮೀ ಗಣೇಶ ಅವರು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ವರಿಷ್ಠಾಧಿಕಾರಿಯಾಗಿದ್ದರು. ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಮಾದಕ ವಸ್ತು ಮಾರಾಟ ಮಾಡಿದವನ ಎರಡು ಕೋಟಿ ರೂಪಾಯಿಯ ಆಸ್ತಿಯನ್ನೇ ಜಪ್ತಿ ಮಾಡಿಸಿದ್ದರು. ಅದಕ್ಕೂ ಮೊದಲು ರಾಮನಗರ ಜಿಲ್ಲೆಯಲ್ಲಿ ಮೂರು ಕೊಲೆ ಜತೆಗೆ ರೇಪ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗೆ ಮರಣದಂಡನೆ ಆಗುವಂತೆ ಸಾಕ್ಷಿ ಕಲೆ ಹಾಕಿದ್ದರು. ಜತೆಗೆ ಇನ್ನೂ ಅನೇಕ ನಿಷ್ಪಕ್ಷಪಾತ ತನಿಖೆ ನಡೆಸಿದ್ದರು.

Exit mobile version