Site icon Vistara News

Jayadev Memorial Rashtrotthana Hospital: ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

#image_title

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (Jayadev Memorial Rashtrotthana Hospital) 8 ಹಾಸಿಗೆಗಳ ಅತ್ಯಾಧುನಿಕ ಡಯಾಲಿಸಿಸ್ ಘಟಕವನ್ನು ಕೇಂದ್ರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉದ್ಘಾಟಿಸಿದರು.

ʼವೃತ್ತಿಪರ ಸೇವೆ-ಕೈಗೆಟಕುವ ದರದ ಚಿಕಿತ್ಸೆʼ ಧ್ಯೇಯವಾಕ್ಯದೊಂದಿಗೆ 2022 ಡಿಸೆಂಬರ್‌ 5ರಂದು ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ ಉದ್ಘಾಟನೆಗೊಂಡಿದೆ. ಪ್ರಸ್ತುತ 19 ಜನರಲ್ ವಾರ್ಡ್‌ಗಳು, 72 ಸೆಮಿ ಪ್ರೈವೇಟ್‌ ವಾರ್ಡ್‌ಗಳು, 11 ಎಮರ್ಜೆನ್ಸಿ ವಾರ್ಡ್‌ಗಳು ಹಾಗೂ 17 ಪ್ರೈವೇಟ್ ವಾರ್ಡ್‌ಗಳು ಸೇರಿ ಒಟ್ಟು 160 ಹಾಸಿಗೆಗಳನ್ನು ಹೊಂದಿರುವ ಸಮಗ್ರ ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳು ಲಭ್ಯವಿದೆ. ಈಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಗುಣಮಟ್ಟದ ಡಯಾಲಿಸಿಸ್ ಚಿಕಿತ್ಸೆ, ರಿಯಾಯಿತಿ ದರದಲ್ಲಿ ನೀಡಲು ಅತ್ಯಾಧುನಿಕ ಡಯಾಲಿಸಿಸ್ ಘಟಕ ಆರಂಭಿಸಲಾಗಿದೆ.

ಇದನ್ನೂ ಓದಿ | ಬೆಂಗಳೂರಲ್ಲಿ ಆ್ಯಪಲ್ ಫೋನ್ ಉತ್ಪಾದನಾ ಘಟಕ ಇಲ್ಲ, ಒಪ್ಪಂದ ಮಾಡಿಕೊಂಡಿಲ್ಲ ಎಂದ ಫಾಕ್ಸ್‌ಕಾನ್

Exit mobile version