Site icon Vistara News

Anurag Thakur : ಲಕ್ಷ್ಯಣ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ಉದ್ಘಾಟಿಸಿದ ಕೇಂದ್ರ ಸಚಿವ

Anurag Thakur

ಆನೇಕಲ್​ (ಬೆಂಗಳೂರು): ಕ್ರೀಡಾ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಒಲಿಂಪಿಕ್ಸ್ ಸೇರಿದಂತೆ ವಿವಿಧ ಜಾಗತಿಕ ಕ್ರೀಡಾಕೂಟಗಳಲ್ಲಿ ನಮ್ಮ ಕ್ರೀಡಾಪಟುಗಳ ಮಹತ್ತರ ಸಾಧೆನ ಮಾಡುತ್ತಿದ್ದಾರೆ. ಹೀಗಾಗಿ ಮತ್ತಷ್ಟು ಕ್ರೀಡಾಪಟುಗಳನ್ನು ಸೃಷ್ಟಿಸುವ ಉದ್ದೇಶದಿಂದ ಬೆಂಗಳೂರಿನಲ್ಲೊಂದು ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಅಕಾಡೆಮಿಯೊಂದು ತಲೆಎತ್ತಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ (Anurag Thakur) ಈ ಸ್ಪೋರ್ಟ್ಸ್ ಅಕಾಡೆಮಿಯನ್ನು ಉದ್ಘಾಟಿಸಿದ್ದಾರೆ.

ಬೆಂಗಳೂರು- ಸರ್ಜಾಪುರ ಮುಖ್ಯರಸ್ತೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯವನ್ನು ಒಳಗೊಂಡಿರುವ ಲಕ್ಷ್ಯಣ್​ ಅಕಾಡೆಮಿ ಆಫ್ ಸ್ಪೋರ್ಟ್ಸ್ ಅನ್ನೂ ಕೇಂದ್ರ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಅನುರಾಗ್ ಠಾಕೂರ್ ಉದ್ಘಾಟಿಸಿದರು. ಬಳಿಕ ಅವರು ಅಲ್ಲಿನ ತರಬೇತುದಾರರೊಂದಿಗೆ ಕ್ರೀಡಾಪಟುಗಳಿಗೆ ನೀಡಿರುವ ತರಬೇತಿ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅಕಾಡೆಮಿಯಲ್ಲಿನ ಟೇಬಲ್ ಟೆನಿಸ್​ ಬಾಸ್ಕೆಟ್‌ಬಾಲ್, ಏರ್-ರೈಫಲ್ ಶೂಟಿಂಗ್ ಮತ್ತು ಫುಟ್‌ಬಾಲ್ ಸೇರಿದಂತೆ ಅನೇಕ ಕ್ರೀಡೆಗಳನ್ನ ಕೇಂದ್ರ ಸಚಿವ ಅನುರಾಗ್ ಠಾಕೂರ್ ಆಡಿದರು.

ಭಾರತದ ಅತ್ಯುನ್ನತ ಅಕಾಡೆಮಿಗಳಲ್ಲಿ ಲಕ್ಷ್ಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ಕೂಡ ಒಂದಾಗಲಿದೆ. ದೇಶಾದ್ಯಂತ ಪ್ರತಿ ರಾಜ್ಯದಲ್ಲಿ 2ರಿಂದ3 ಅಕಾಡೆಮಿಗಳ ಅಗತ್ಯ ಇದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಸದೃಢಗೊಳಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರದ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದರು.

ಲಕ್ಷ್ಯಣ್ ಅಕಾಡೆಮಿ ಆಫ್ ಸ್ಪೋರ್ಟ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಚೆಸ್ ಹಾಲ್, ಸ್ಕ್ವಾಷ್ ಕೋರ್ಟ್‌ಗಳು, ಫುಟ್‌ಬಾಲ್ ಮೈದಾನಗಳು, ಜಿಮ್ನಾಸ್ಟಿಕ್ಸ್ ಅರೆನಾ, ಶೂಟಿಂಗ್ ರೇಂಜ್, ಬ್ಯಾಡ್ಮಿಂಟನ್ ಅರೆನಾ, ಬಾಸ್ಕೆಟ್‌ಬಾಲ್ ಕೋರ್ಟ್‌ಗಳು, ಹೈ-ಪರ್ಫಾರ್ಮೆನ್ಸ್ ಜಿಮ್ ಸೆಂಟರ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಾರತದ ಕ್ರೀಡಾಪಟುಗಳು ಈ ಅಕಾಡೆಮಿಯ ಮೂಲಕ ತಮ್ಮ ಕ್ರೀಡೆಯಲ್ಲಿ ಮತ್ತಷ್ಟು ಭವಿಷ್ಯ ಕಂಡುಕೊಳ್ಳಬಹುದು ಎಂದು ನುಡಿದರು.

ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಕ್ರೀಡಾಪಟುಗಳು ಅಕಾಡೆಮಿಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಭಾರತದಲ್ಲಿ ಯುವಕರ ಜನಸಂಖ್ಯೆ ಹೆಚ್ಚಿದೆ. ಕ್ರೀಡಾಪಟುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ಕ್ರೀಡಾಪಟುಗಳಿಗೂ ಕ್ರೀಡಾ ಸೌಲಭ್ಯಗಳನ್ನ ಕಲ್ಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಹಾಕಿ ದಂತಕತೆ ಧನರಾಜ್ ಪಿಳ್ಳೆ ಅಭಿಪ್ರಾಯಪಟ್ಟರು.

ಇನ್ನೂ ಕಾರ್ಯಕ್ರಮದಲ್ಲಿ ಲಕ್ಷ್ಯಣ್​ ಅಕಾಡೆಮಿ ಆಫ್ ಸ್ಪೋರ್ಟ್ಸ್​​ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಲಕ್ಕಣ್ಣ ಯಾಶಿಕ ಮಾತನಾಡಿ ಖ್ಯಾತ ಕ್ರೀಡಾಪಟುಗಳು ಹಾಗು ಕಾರ್ಯನಿರ್ವಾಹಕ ನಿರ್ದೇಶಕರಾದ ಧನರಾಜ್ ಪಿಳ್ಳೆ, ಅರ್ಜುನ್ ಹಾಲಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತದ ಪರ ಒಲಂಪಿಕ್ ಸೇರಿದಂತೆ ಇನ್ನಿತರೆ ಸ್ಪೋಟ್ಸ್ ನಲ್ಲಿ ಉತ್ತಮವಾದ ಕ್ರೀಡಾಪಟುಗಳನ್ನು ತರಬೇತುಗೊಳಿಸುವ ಅಕಾಡೆಮಿಯಾಗಲಿದೆ ಎಂದು ಹೇಳಿದರು.

Exit mobile version