ಹುಲಸೂರು: ತಾಲೂಕಿನ ತೊಗಲೂರು ಗ್ರಾಮದಲ್ಲಿ ಶುಕ್ರವಾರ ಸೊಂತದ ಶ್ರೀ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರ ಭವ್ಯ ರಥ ನಿರ್ಮಾಣದ ನಿಮಿತ್ತ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಹಾಗೂ ದುಶ್ಚಟಗಳನ್ನು (Bad habits) ನಮ್ಮ ಜೋಳಿಗೆಗೆ ಹಾಕಿ ಕಾರ್ಯಕ್ರಮದ ಭವ್ಯ ಮೆರವಣಿಗೆ ಜರುಗಿತು.
ಸೊಂತದ ಶ್ರೀ ಅಭಿನವ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರು ಮೆರವಣಿಗೆಗೆ ಚಾಲನೆ ನೀಡಿ, ಬಳಿಕ ಆಶೀರ್ವಚನ ನೀಡಿದರು.
ತಾವು ಯಾವುದೇ ಕಾಯಕದಲ್ಲಿ ತೊಡಗಿದರೂ ಮೊದಲು ಸಮಯ ಪಾಲನೆ ಮಾಡಿ, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಒಮ್ಮೆ ಸಮಯ ಕಳೆದು ಹೋದ ಮೇಲೆ ಮತ್ತೆ ಬರಲು ಸಾಧ್ಯವಿಲ್ಲ. ತಾವು ಸಮಯಕ್ಕೆ ಸರಿಯಾಗಿ ದಿನಚರಿಯ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಕೇಂದ್ರ, ಆಪ್ ಜಟಾಪಟಿ; ಅಧಿಕಾರಿಗಳ ವರ್ಗಾವಣೆಗೆ ಪ್ರಾಧಿಕಾರ ರಚಿಸಿದ್ದಕ್ಕೆ ಆಪ್ ಆಕ್ರೋಶ
ಮೆರವಣಿಗೆಯಲ್ಲಿ ಗ್ರಾಮದ ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಮಹಾಲಕ್ಷ್ಮಿ ಮಹಿಳಾ ಭಜನಾ ತಂಡದ ಸದಸ್ಯರಿಂದ ಭಜನೆ ಮಾಡುತ್ತಾ ಸಾಗುವುದು ನೋಡುಗರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಗ್ರಾಮದ ಭಕ್ತಾದಿಗಳು, ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು.